ಆಳ್ವಾಸ್ ಆಯುರ್ವೇದ ಕಾಲೇಜಿನ ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ಆನ್ಲೈನ್ ವಿಚಾರ ಸಂಕಿರಣ

0
137
Tap to know MORE!

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜಿನ ವತಿಯಿಂದ ವೆಬಿನಾರ್ ಆಳ್ವಾಸ್ ಆಯುರ್ವೇದ ಕಾಲೇಜಿನ ಆಳ್ವಾಸ್ ಪಾರಂಪರಿಕ ಔಷಧ ಭಂಡಾರದ (ಆತ್ಮ ರಿಸರ್ಚ್ ಸೆಂಟರ್) ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ಆನ್ಲೈನ್ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಆಳ್ವಾಸ್ ಕಾಲೇಜಿನಲ್ಲಿ ಬಹುಭಾಷಾ ಕವಿಗೋಷ್ಠಿ

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೃಷಿಕ ಹಾಗೂ ಪರಿಸರ ತಜ್ಞರಾಗಿರುವ ವಸಂತ ಕಜೆ `ತಂತ್ರಜ್ಞಾನ-ಪರಿಸರ-ವೃಕ್ಷಸಂರಕ್ಷಣೆ’ ವಿಷಯದ ಕುರಿತು ಮಾತನಾಡಿದರು. `ಪಶ್ಚಿಮ ಘಟ್ಟದಲ್ಲಿ ನಶಿಸಿ ಹೋಗುತ್ತಿರುವ ಜೀವವೈವಿಧ್ಯತೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ಸಂರಕ್ಷಣೆಯಿಂದ ಮಾತ್ರ ಮಾನವನ ಆರೋಗ್ಯ ವೃದ್ಧಿಸಲು ಸಾಧ್ಯ’ ಎಂದ ವಸಂತ ಕಜೆ ಕೇವಲ ಆರ್ಥಿಕ ಲಾಭದೊಡನೆ ಪರಿಸರವನ್ನು ನೋಡಬಾರದು. ಪರಿಸರದೊಡನೆ ನಮ್ಮ ಜೀವನವು ಬೆಸೆದುಕೊಂಡಿರುವುದರಿಂದ ನಮ್ಮೆಲ್ಲರ ಜೀವನಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಪರಿಸರದ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಿಸ್ಕೊ ವೆಬೆಕ್ಸ್ ತಾಣದ ಮೂಲಕ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಸಜಿತ್ ಎಂ. ಸ್ವಾಗತಿಸಿದರು. ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷಯಾ ಬಿ. ಅತಿಥಿಗಳ ಕಿರು ಪರಿಚಯ ನೀಡಿದರು. ಕಾರ್ಯಕ್ರಮದ ಸಂಯೋಜಕ ಆತ್ಮ ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಯಾಣ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here