ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಶಿಕ್ಷಕರಿಗೆ ಐಐಐಟಿ ಅಲಹಾಬಾದ್‌ನ ಎಫ್‌ಡಿಪಿ ಕಾರ್ಯಾಗಾರ

0
156
Tap to know MORE!

ಮೂಡುಬಿದಿರೆ: ಪ್ರತಿಯೊಬ್ಬ ಶಿಕ್ಷಕನೂ ತನ್ನ ಮುಂದಿರುವ ಸವಾಲುಗಳನ್ನ ಮೀರಿ ಯೋಚಿಸಿ, ಕಾರ್ಯ ಪ್ರವೃತ್ತನಾದಾಗ ಶಿಕ್ಷಣದ ಮೂಲ ಧ್ಯೇಯ- ಸರ್ವಾಂಗೀಣ ಪ್ರಗತಿ ವಿದ್ಯಾರ್ಥಿಯಲ್ಲಿ ಮೂಡಲು ಸಾಧ್ಯ ಎಂದು ಅಲಹಾಬಾದ್ ಐಐಐಟಿಯ ನಿರ್ದೇಶಕ ಪ್ರೋ ಪಿ. ನಾಗಭೂಷಣ್ ತಿಳಿಸಿದರು.

ಅವರು ಶುಕ್ರವಾರ, ಮಿಜಾರ್ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಿಂದ ಆಯೋಜಿಸಲ್ಪಟ್ಟ ಒಂದು ದಿನದ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್(ಎಫ್‌ಡಿಪಿ)- “ಹೇಗೆ ಬೋಧನಾ- ಕಲಿಕಾ ಪ್ರಕ್ರಿಯೆಯಲ್ಲಿ ಗುಣಮಟ್ಟದ ಬದಲಾವಣೆ ಸಾಧ್ಯ” ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಅಧೀನದಲ್ಲಿ ಕಾರ‍್ಯ ನಿರ್ವಹಿಸುವ ಹಿನ್ನಲೆಯಲ್ಲಿ ಅನೇಕ ನಿರ್ಬಂಧಗಳು ತಮ್ಮನ್ನು ಸೀಮಿತಗೊಳಿಸಿದರೂ, ಅದನ್ನು ಮೀರಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರೂ ದುಡಿಯುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಕಾರ‍್ಯರೂಪಕ್ಕೆ ಬರಲಿರುವ ಹೊಸ ಶಿಕ್ಷಣ ನೀತಿ ಶೈಕ್ಷಣಿಕ ಸ್ವಾಯತ್ತತೆಗೆ ಹೆಚ್ಚು ಒತ್ತು ನೀಡಲಿದ್ದು ಶಿಕ್ಷಕರು ಇನ್ನೂ ಹೆಚ್ಚಿನ ಜವಾಬ್ದಾರಿ ಹಾಗೂ ಕರ‍್ಯ ಕ್ಷಮತೆಯನ್ನು ಪ್ರದರ್ಶಿಸಬೇಕು ಎಂದರು.

ಶಿಕ್ಷಕನು ತಾನು ನಿರ್ವಹಿಸುತ್ತಿರುವ ಕೆಲಸದ ಆದಾರದ ಮೇಲೆ ತನ್ನನ್ನು ತಾನು ಮೌಲ್ಯಮಾಪನಕ್ಕೆ ಹಚ್ಚಿ, ಪ್ರತಿ ಹಂತದಲ್ಲೂ ಯೋಜಿಸಿ, ಯೋಚಿಸಿ, ಕರ‍್ಯವನ್ನು ನೆರವೇರಿಸಬೇಕು. ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಸಿದ್ದಪಡಿಸುವ ಪದ್ದತಿಗೆ ಜೋತು ಬೀಳದೆ, ಅವರು ತಾವು ಪಡೆದ ಜ್ಞಾನವನ್ನು ಹೇಗೆ ಜೀವನದಲ್ಲಿ ಆಳವಡಿಸಿಕೊಳ್ಳಲು ಸಾಧ್ಯ ಎಂಬುದನ್ನು ಕಲಿಸುವ ಶಿಕ್ಷಣ ಬೇಕು ಎಂದರು. ಈ ಹಿನ್ನಲೆಯಲ್ಲಿ ಶಿಕ್ಷಕನು ತರಗತಿಗಳಲ್ಲಿ ಏಕಾಲಾಪ ಪದ್ದತಿಯನ್ನು ಅನುಸರಿಸದೆ ಸಂವಾದ, ಸಂಭಾಷಣೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.

ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ತಾನು ಹೊಂದಿರುವ ವಿವಿಧ ಪ್ರತಿಷ್ಟಿತ ಸಂಸ್ಥೆಗಳೊಂದಿಗಿನ ಶೈಕ್ಷಣಿಕ ಒಡಂಬಡಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅನ್ವಹಿಕ ಜ್ಞಾನವನ್ನು ಲಭಿಸುವಂತೆ ಮಾಡುತ್ತಿದ್ದು, ಸಿಗುವ ಪ್ರತಿ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ ಎಂದರು.

ಈ ಒಂದು ದಿನದ ಎಫ್‌ಡಿಪಿ ಕಾರ್ಯಾಗಾರವನ್ನು ಐಐಐಟಿ ಅಲಹಾಬಾದ್ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ನಡುವೆ ೨೦೧೮ರಲ್ಲಿ ನಡೆದ ಶೈಕ್ಷಣಿಕ ಒಪ್ಪಂದದ ನೆಲೆಯಲ್ಲಿ ಆಯೋಜಿಸಲಾಗಿತ್ತು. ಈ ಒಪ್ಪಂದದಿಂದ ಇದುವರೆಗೆ ಕಾಲೇಜಿನ ೧೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಮ್ಯೆಷಿನ ಲರ್ನಿಂಗ್ ಹಾಗೂ ಡೀಪ್ ಲರ್ನಿಂಗ್ ಕ್ಷೇತ್ರದಲ್ಲಿ ೩ ಸಲ ಅಲ್ಲಿನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದಿದ್ದು, ೪೦ಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ಇಂಟರ್ನ್‌ಶಿಫ್ ಮಾಡಲು ಅವಕಾಶ ಪಡೆದುದಲ್ಲದೆ, ಸದಾ ಅಲ್ಲಿನ ೮ ರಿಂದ ೧೦ ಉಪನ್ಯಾಸಕರು ತರಬೇತಿ ನೀಡಲು ಮೂಡುಬಿದಿರೆಗೆ ಆಗಮಿಸುತ್ತಿರುತ್ತಾರೆ.

ಒಂದು ದಿನದ ಕಾರ್ಯಾಗಾರದಲ್ಲಿ ಡಾ|ಪಿ ನಾಗಭೂಷಣ್ ತಮ್ಮ ಪ್ರಧಾನ ಭಾಷಣದಲ್ಲಿ “ಸಮ್ ತೋಟ್ಸ್ ಫಾರ್ ಬೆಟರ್ ಟೀಚಿಂಗ್- ಲರ್ನಿಂಗ್ ಅಂಡರ್ ಅಫೀಲಿಯೆಟಿಂಗ್ ಕನ್ಸ್ಟ್ರೆಂಟ್ಸ್”, ಒಮಾನ್ (ಮಸ್ಕತ್) ಮಿಡ್ಲೀಸ್ಟ್ ಕಾಲೇಜಿನ ಡಾ ಸೈಯದ್ ಝಾಕಿರ್ ಅಲಿ- “ಕಂಟೀನ್ಯೂಸ್ ಅಸೆಸೆಮೆಂಟ್ಸ್ ಸಮ್ ಎಕ್ಸಪೀರಿಯನ್ಸ್ ಟೂ ಇಂಪ್ರೂ ಕ್ವಾಲಿಟಿ ಇನ್ ಟೀಚಿಂಗ್ ಆ್ಯಂಡ್ ಲರ್ನಿಂಗ್ ಪ್ರೋಸೆಸ್”, ಐಐಐಟಿ ಅಲಹಾಬಾದ್‌ನ ಸಹಾಯಕ ಪ್ರಾಧ್ಯಾಪಕ ವ್ರಿಜೇಂದರ್ ಸಿಂಗ್ ಹಾಗೂ ಐಐಐಟಿ ಅಲಹಾಬಾದ್‌ನ ಡಾ ಮಹಮ್ಮದ್ ಜಾವೇದ್ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಾಗಾರದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಮಂಜುನಾಥ ಕೊಠಾರಿ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಪಾಲ್ಗೊಂಡರು. ಸಹಾಯಕ ಪ್ರಾಧ್ಯಪಕಿ ಮೇಘಾ ಹೆಗ್ಡೆ ನಿರ್ವಹಿಸಿ, ಶಿಲ್ಪಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here