ಆಳ್ವಾಸ್ ಕಾಲೇಜಿನಲ್ಲಿ ಕಾರ್ಪೋರೇಟ್ ಪ್ರಪಂಚದ ಕುರಿತು ಅಂತರರಾಷ್ಟ್ರೀಯ ವೆಬಿನಾರ್

0
261
Tap to know MORE!

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಕಾಮರ್ಸ್ ವಿಭಾಗದ ವತಿಯಿಂದ ಮಾರ್ಕೆಟಿಂಗ್ ವೃತ್ತಿ – ಪಠ್ಯಪುಸ್ತಕದಿಂದ ಹೊರತಾದ ಕಾರ್ಪೊರೇಟ್ ಪ್ರಪಂಚ ಎಂಬ ವಿಷಯದ ಕುರಿತಾದ ಅಂತರರಾಷ್ಟ್ರೀಯ ವೆಬಿನಾರ್ ನ್ನು ಒಕ್ಟೋಬರ್ 16 ರಂದು ಗೂಗಲ್ ಮೀಟ್ ನಲ್ಲಿ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ದುಬೈಯ ಎಡಿಎಎಂ ಗ್ಲೋಬಲ್ ನ ಮಾರ್ಕೆಟಿಂಗ್ ಹಾಗೂ ಇವೆಂಟ್ ಸ್ಟಾರ್ಟರ್ಜಿಸ್ಟ್ ಆಗಿರುವ ವೈಷ್ಣವಿ ವಿಶ್ವನಾಥ್, ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಮಾರ್ಕೆಟಿಂಗ್ ವೃತ್ತಿಜೀವನದ ಮಹತ್ವದ ಬಗ್ಗೆ ಮಾತನಾಡಿದರು. ಉದ್ದೇಶಿತ ಪ್ರೇಕ್ಷಕರನ್ನು ಆಕರ್ಷಿಸುವ ಮಾರ್ಗಗಳು ಮತ್ತು ಮಾರಾಟವನ್ನು ಯಾವ ರೀತಿ ಹೆಚ್ಚಿಸಬೇಕು ಅಲ್ಲದೇ ದೈಹಿಕ ಸಂವಹನವಿಲ್ಲದೆ ಎಲ್ಲಾ ಗ್ರಾಹಕರನ್ನು ತಲುಪುವುದು ಹೇಗೆ ಎಂಬುದರ ಕುರಿತು ಹೇಳಿದರು.

ಸಾಮಾಜಿಕ ಮಾಧ್ಯಮಗಳು, ಗೂಗಲ್ ಜಾಹೀರಾತುಗಳು, ಗೂಗಲ್ ವಿಶ್ಲೇಷಣೆ, ಇ-ಮೇಲ್ಗಳು, ಎಸ್‌ಎಂಎಸ್ ಮಾರ್ಕೆಟಿಂಗ್ ಪಿಆರ್ ಅಭಿಯಾನವು ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಪ್ರಮುಖ ಪ್ರಭಾವ ಬೀರುತ್ತದೆ. ಮಾರ್ಕೆಟಿಂಗ್ ವೃತ್ತಿಯನ್ನು ಆಯ್ದುಕೊಳ್ಳುವಾಗ ಮಾರಾಟ ಮತ್ತು ಮಾರ್ಕೆಟಿಂಗ್ ಉದ್ಯೋಗಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ಹೊಂದಿರಬೇಕು. ಯಾವ ಮಾರ್ಕೆಟಿಂಗ್ ಪ್ರೊಫೈಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ ಮತ್ತು ಸ್ಪರ್ಧೆಯನ್ನು ಎದುರಿಸಲು ಯಾವ ಕೌಶಲ್ಯ ಮತ್ತು ಸಾಫ್ಟ್‌ವೇರ್ ಅಗತ್ಯವಿದೆ ಎಂಬುದನ್ನು ತಿಳಿಸಿದರು.

ವೆಬಿನಾರ್ ನಲ್ಲಿ 100 ಮಂದಿ ಭಾಗವಹಿಸಿದ್ದು ಭಾರತ ಸೇರಿದಂತೆ ಲಂಡನ್, ಡೆನ್ಮಾರ್ಕ್, ಸ್ವೀಡನ್, ದುಬೈ ಹಾಗೂ ಅಬುದಾಬಿಯಿಂದಲೂ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯುಎಸಿ ಮುಖ್ಯಸ್ಥರಾದ ಡಾ. ರಾಜೇಶ್ ಬಿ, ಕಾಮರ್ಸ್ ವಿಭಾಗದ ಸಂಯೋಜಕಿ ಶರ್ಮಿಳಾ ಕುಂದರ್, ವೆಬಿನಾರ್ ಸಂಯೋಜಕಿ ವೀಣಾ ಮೊಂತೆರಿಯೋ ಉಪಸ್ಥಿತರಿದ್ದರು. ಮಧುರಾ ಹೆಗ್ಡೆ ಪ್ರಾರ್ಥನೆಯನ್ನು ನೆರವೇರಿಸಿದರು. ಶ್ರೇಯಾ ಪೊನ್ನಪ್ಪ ವಂದಿಸಿದರು ಹಾಗೂ ಶರಣ್ಯ ದೇವಿ ವೆಬಿನಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here