ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ಮತ್ತು ಸಮಾಜ ಕಾರ್ಯ ವಿಭಾಗದ ವತಿಯಿಂದ ಪುತ್ತಿಗೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವಣ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಲೇಜಿನ ಸುಮಾರು ೨೦೦ ವಿದ್ಯಾರ್ಥಿಗಳು ಎರಡು ತಂಡಗಳಲ್ಲಿ ಸ್ವಚ್ಛತಾ ಕರ್ಯವನ್ನು ನಡೆಸಿದರು. ಒಂದು ತಂಡವು ಹಂಡೇಲು ರಸ್ತೆಯಿಂದ ಒಂದು ತಂಡ ಹಾಗೂ ಸಂಪಿಗೆ ರಸ್ತೆಯಿಂದ ಮತ್ತೊಂದು ತಂಡ ಈ ಪ್ಲಾಗಿಂಗ್ನಲ್ಲಿ ಭಾಗಿಯಾಯಿತು. ಒಟ್ಟು ೩೦೦ ಚೀಲದಷ್ಟು ಪ್ಲಾಸ್ಟಿಕ್ ಕಸ ಸಂಗ್ರಹ ಮಾಡಲಾಗಿದೆ.
ಇದನ್ನೂ ಓದಿ: ಆಳ್ವಾಸ್ ಪತ್ರಿಕೋದ್ಯಮ ವಿಭಾಗದಿಂದ ಮೀಡಿಯಾ ಮಂಥನ್ ಸಂವಾದ ಕಾರ್ಯಕ್ರಮ
ಈ ಸಂದರ್ಭ ಪಂಚಾಯತ್ ಸದಸ್ಯರು, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಮಯ್ಯ ಹಾಗೂ ವಿಭಾಗದ ಇತರ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.