ಮೂಡುಬಿದಿರೆ ಡಿ 20: “ಅನೇಕ ಮಹಾತ್ಮರ ಚಿಂತನೆ ಮತ್ತು ಪರಿಶ್ರಮದಿಂದ ಮಾನವ ಹಿತದ ಹಲವು ಕಾರ್ಯಗಳಾಗಿವೆ. ಅದರ ಫಲಾನುಭವಿಗಳಾದ ನಾವು ಮಹಾತ್ಮರ ಆಶಯದಂತೆ ನಡೆಯಬೇಕಾಗಿದೆ. ಅವತಾರ ಪುರುಷರಂತೆ ಚಿತ್ರಿಸಿ ಅವರ ಆಶಯಕ್ಕೆ ಬಲಿಕೊಡುವುದು ಸಲ್ಲದು . ಸಂದೇಶಗಳ ಅನುಷ್ಠಾನ ಮುಖ್ಯವೇ ಹೊರತು ಆರಾಧನೆಯಲ್ಲ” ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ನುಡಿದರು.
ಅವರು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ವಿಭಾಗದ ವತಿಯಿಂದ ಆಳ್ವಾಸ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನೂ ಓದಿ: ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಿಗೆ ‘’ ಸ್ಟೂಡೆಂಟ್ ಮೆಂಟರಿಂಗ್’’ ಕಾರ್ಯಾಗಾರ
ಈ ಬಗ್ಗೆ ತಿಳಿಯುವುದಕ್ಕಿಂತ ಅಂಬೇಡ್ಕರ್ ಅವರನ್ನು ಅರ್ಥೈಸಿದಾಗ ನಮ್ಮ ವರ್ತನೆ ಸಹಜವಾಗಿ ಬದಲಾಗುತ್ತದೆ. ಶ್ರೇಷ್ಠ – ಕನಿಷ್ಟ ಎಂಬ ಭ್ರಮೆ ತೊಲಗುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, “ಓದು ಒಂದು ಆಪ್ತ ಅನುಭವ . ಮಾಹಿತಿ ಸಂಗ್ರಹವಷ್ಟೆ ಜ್ಞಾನ ಎಂಬ ಭಾವನೆ ಇದೆ. ಪುಸ್ತಕ ಓದಿಗೆ ಹಲವು ಸವಾಲುಗಳಿವೆ. ಆದರೂ ಅದರಿಂದ ವಂಚಿತರಾಗದಂತೆ ಓದಿಗೊಂದು ಕಾಲ ಮೀಸಲಿಡಿ” ಎಂದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಅಂಬೇಡ್ಕರ್ ಜೀವನ ಮತ್ತು ಸಂದೇಶದ ಬಗ್ಗೆ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ವಿತರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ ಕೈರೋಡಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಉಮಾಶ್ರೀ ಕಾರ್ಯಕ್ರಮ ನಿರೂಪಿಸಿದರು. ರೂಪ ಬಾಬು ವಂದಿಸಿದರು.