ಆಳ್ವಾಸ್‌ನಲ್ಲಿ ಬೃಹತ್ ವಿದ್ಯಾರ್ಥಿ ಲಸಿಕಾ ಅಭಿಯಾನ | ಎರಡು ದಿನದಲ್ಲಿ 3,563 ಫಲಾನುಭವಿಗಳಿಗೆ ಲಸಿಕೆ

0
138
Tap to know MORE!

ಮೂಡುಬಿದಿರೆ: ಕರ್ನಾಟಕ ಸರಕಾರ ನಡೆಸುತ್ತಿರುವ ೧೮ ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಬೃಹತ್ ಉಚಿತ ಲಸಿಕಾ ಅಭಿಯಾನದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು. ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆದ ಎರಡನೇ ಹಂತದ ಅಭಿಯಾನದಲ್ಲಿ ೧,೯೪೭ ವಿದ್ಯಾರ್ಥಿಗಳಿಗೆ ಕೊವ್ಯಾಕ್ಸಿನ್ ಲಸಿಕೆ ವಿತರಿಸಲಾಯಿತು.

ವಿದ್ಯಾರ್ಥಿ ಲಸಿಕಾ ಅಭಿಯಾನ: ಆಳ್ವಾಸ್ ಕಾಲೇಜಿನಲ್ಲಿ 1,616 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ

ಆಳ್ವಾಸ್ ಕಾಲೇಜು ಸೇರಿದಂತೆ ಮೂಡುಬಿದಿರೆಯ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳು ಲಸಿಕೆಯ ಪ್ರಥಮ ಡೋಸ್ ಪಡೆದರು. ಕಾಲೇಜಿನ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನ ನುಡಿಸಿರಿ ವೇದಿಕೆಯಲ್ಲಿ ಲಸಿಕೆ ಅಭಿಯಾನದ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು, ವೈದ್ಯಕೀಯ ವೃಂದ ಹಾಗೂ ಇತರೆ ಸಿಬ್ಬಂದಿಗಳು ಅಭಿಯಾನದ ಸುವ್ಯವಸ್ಥೆಯನ್ನು ನೋಡಿಕೊಂಡರು. ಮಧ್ಯಾಹ್ನ ೧.೩೦ ರೊಳಗೆ ೧೯೪೭ ವಿದ್ಯಾರ್ಥಿಗಳಿಗೆ ಲಸಿಕೆ ಪೂರೈಸಲಾಯಿತು.

ಡ್ರಾಮಾ ಜೂನಿಯರ್ಸ್ ಖ್ಯಾತಿಯ ‘ಎಕ್ಸ್ಪ್ರೆಷನ್ ಕ್ವೀನ್’ ಅನ್ವಿಷಾ ವಾಮಂಜೂರು

ಮೂಡುಬಿದಿರೆ ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪುತ್ತಿಗೆ ಪಂಚಾಯತ್‌ನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕೊರೊನಾ ವಾರಿಯರ್ ವಾಸುದೇವ್ ನಾಯಕ್, ಪಂಚಾಯತ್ ಸದಸ್ಯ ಮುರಳೀಧರ್ ಕೋಟ್ಯಾನ್, ಕೋವಿಡ್ ನೋಡಲ್ ಆಫೀಸರ್ ಡಾ.ಸುಭಾಷ್ ಶೆಟ್ಟಿ, ಡಾ.ಮನಿಷಾ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಿದ್ಯಾರ್ಥಿ ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ ೧೬೧೬ ಹಾಗೂ ಎರಡನೇ ಹಂತದಲ್ಲಿ ೧೯೪೭ ವಿದ್ಯಾರ್ಥಿಗಳು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಅಭಿಯಾನದ ಸುವ್ಯವಸ್ಥೆ ಕಾಪಾಡಲು ಟೋಕನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಲಸಿಕೆ ಪಡೆದ ಬಳಿಕ ವಿಶ್ರಮಿಸಲು ವಿಶ್ರಾಂತಿ ವ್ಯವಸ್ಥೆ ಕೂಡ ಮಾಡಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರೂ ಸಾಮಾಜಿಕ ಅಂತರ ಕಾಪಾಡುವ ಮೂಲಕ ವ್ಯವಸ್ಥಿತ ಅಭಿಯಾನವನ್ನು ನಡೆಸಲಾಯಿತು. ಸರಕಾರಿ ವೈದ್ಯರ ತಂಡ ವೈದ್ಯಕೀಯ ಸೇವೆ ಒದಗಿಸಿತು.

LEAVE A REPLY

Please enter your comment!
Please enter your name here