ಮೂಡುಬಿದಿರೆ: ಸ್ವಾತ್ರಂತ್ರ್ಯ ಹೋರಾಟದಂತೆ ಕರ್ನಾಟಕದ ಏಕೀಕರಣಕ್ಕೆ ಚಾರಿತ್ರಿಕ ಹಿನ್ನೆಲೆಯಿದೆ. ಅನೇಕ ಆಶೋತ್ರರಗಳನ್ನು ಅಂತರಂಗದಲ್ಲಿರಿಸಿ ನಡೆಸಿದ ಹೋರಾಟದ ಫಲವೇ ಕರ್ನಾಟಕ ರಾಜ್ಯದ ಉದಯ. ಅನೇಕ ಸವಾಲುಗಳನ್ನು ಎದುರಿಸಿ ಕರ್ನಾಟಕ ಬೆಳೆದಿದೆ. ಹೊಸ ಅವಕಾಶಗಳೊಂದಿಗೆ ಕನ್ನಡ ಬೆಳೆಯಬೇಕಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಕರ್ನಾಟಕದ ಗತ ವೈಭವವನ್ನು ತಿಳಿದುಕೊಳ್ಳುವುದರೊಂದಿಗೆ, ಕರ್ನಾಟಕ ರಾಜ್ಯದ ಹುಟ್ಟಿನ ಹಿಂದಿರುವ ಅನೇಕ ಮಹನೀಯರ ಶ್ರಮವನ್ನು,ತ್ಯಾಗವನ್ನು ನೆನೆದುಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳುವುದು ಅಗತ್ಯ ಎಂದರು.
ಇದನ್ನೂ ನೋಡಿ :ಆಳ್ವಾಸ್ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ
ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಹರೀಶ ಟಿ ಜಿ ಸ್ವಾಗತಿಸಿದರು. ಡಾ. ಜ್ಯೋತಿ ರೈ ವಂದಿಸಿದರು. ಡಾ ಕೃಷ್ಣರಾಜ ಕರಬ ಕಾರ್ಯಕ್ರಮ ನಿರ್ವಹಿಸಿದರು.