ಆಸ್ಪತ್ರೆಯಲ್ಲಿ ಮಹಿಳೆಯರ ಶಾಲು, ದುಪ್ಪಟ್ಟ ನಿಷೇಧ

0
119
Tap to know MORE!

ಬೆಂಗಳೂರು : ನಗರದ ಆಸ್ಪತ್ರೆಯೊಂದು ಕೊರೊನಾ ಸೋಂಕಿತ ಮಹಿಳೆಯರು ಉದ್ದ ದುಪ್ಪಟ್ಟ ಅಥವಾ ಸ್ಕ್ಯಾರ್ಫ್ ನ್ನು ಧರಿಸುವುದನ್ನು ನಿಷೇಧಿಸಿದೆ. ಈ ಮೊದಲು ಎರಡು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಕಾರಣ ಮುಂಜಾಗ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಹೊಸ ನಿಯಮದಂತೆ ಮಹಿಳಾ ರೋಗಿಗಳು ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ವಸ್ತ್ರವನ್ನು ತೊಡಬೇಕು. ವಯಸ್ಸಾದ ಮಹಿಳೆಯರಿಗೂ ಇದು ಅನ್ವಯಿಸುತ್ತದೆ.

ಕೆ.ಸಿ ಜನರಲ್ ಆಸ್ಪತ್ರೆಯ ಸೂಪರಿಡೆಂಟ್ ವೆಂಕಟೇಶಯ್ಯ ಮಾತನಾಡಿ ಮಹಿಳೆಯರಿಗೆ ವಸ್ತ್ರ ನಿಯಮ ಮಾಡಿದಂತೆ, ಖಿನ್ನತೆಯಲ್ಲಿರುವ ರೋಗಿಗಳಿಗೂ ಎಚ್ಚರ ವಹಿಸಲಾಗಿದೆ. ಖಿನ್ನತೆಯಲ್ಲಿರುವ ರೋಗಿಗಳು ಶೌಚಾಲಯಕ್ಕೆ ತೆರಳುವಾಗ ಅವರೊ ದಿಗೆ ಇನ್ನೊಬ್ಬರು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಮನ ಸಂತೋಷಕ್ಕೆ ದೂರದರ್ಶನದ ವ್ಯವಸ್ಥೆಯೂ ಇದೆಯೆಂದು ಹೇಳಿದರು.

LEAVE A REPLY

Please enter your comment!
Please enter your name here