ಆ್ಯಪ್‌ ಬ್ಯಾನ್ : 47 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದ ಭಾರತ!

0
160
Tap to know MORE!

59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದ ಸುಮಾರು ಒಂದು ತಿಂಗಳ ನಂತರ ಭಾರತವು, ಚೀನೀ ಮೂಲದ 47 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. 47 ನಿಷೇಧಿತ ಚೀನೀ ಅಪ್ಲಿಕೇಶನ್‌ಗಳು ಈ ಹಿಂದೆ ನಿಷೇಧಿಸಲಾದ ಆ್ಯಪ್‌ಗಳ ತದ್ರೂಪುಗಳಾಗಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿಷೇಧಿಸಿರುವ 47 ಚೀನೀ ಆ್ಯಪ್‌ಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.

ಎಲ್ಲಾ 47 ಅಪ್ಲಿಕೇಶನ್‌ಗಳನ್ನು ಜೂನ್‌ನಲ್ಲಿ ನಿಷೇಧಿಸಲಾದ 59 ಚೀನೀ ಅಪ್ಲಿಕೇಶನ್‌ಗಳ ಕ್ಲೋನ್ ಪ್ರತಿಗಳಾಗಿವೆ. ಕ್ಲೋನ್‌ಗಳಲ್ಲಿ ಟಿಕ್ಟಾಕ್ ಲೈಟ್, ಹೆಲೋ ಲೈಟ್, ಶೇರ್ ಇಟ್ ಲೈಟ್, ಬಿಗೊ ಲೈವ್ ಲೈಟ್ ಮತ್ತು ವಿಎಫ್‌ವೈ ಲೈಟ್ ನಂತಹ ಆ್ಯಪ್‌ಗಳು ಸೇರಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಬಳಕೆದಾರರ ಗೌಪ್ಯತೆ ಅಥವಾ ರಾಷ್ಟ್ರೀಯ ಭದ್ರತಾ ಉಲ್ಲಂಘನೆಗಳ ಬಗ್ಗೆ ಸದ್ಯ ಪರಿಶೀಲಿಸಲಾಗುತ್ತದೆ.

LEAVE A REPLY

Please enter your comment!
Please enter your name here