“ಭಾರತದಲ್ಲಿ ಆ್ಯಪ್ ಬ್ಯಾನ್ ಆಗಿರುವುದರಿಂದ ಚೀನಾ ದೇಶಕ್ಕೆ ಏನೂ ನಷ್ಟ ಆಗಲ್ಲ. ಅದೇ ರೀತಿ, ಆ್ಯಪ್ ಬ್ಯಾನ್ ನಿಂದ ಭಾರತಕ್ಕೂ ಏನೂ ಲಾಭ ಇಲ್ಲ” ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಚೀನಾ ಪರ ಬ್ಯಾಟ್ ಬೀಸಿದ್ದಾರೆ. ಕೇಂದ್ರ ಸರ್ಕಾರವು ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿರುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಪಿಎಂ ಕೇರ್ಸ್ ಫಂಡ್ ಗೆ ಟಿಕ್ ಟಾಕ್ ನಿಂದ 30 ಕೋಟಿ ಬಂದಿದೆ. ಆ ಆ್ಯಪ್ ಬ್ಯಾನ್ ಮಾಡಿದ್ದಲ್ಲದೆ, ಅವರದ್ದೇ ಹಣವನ್ನು ತೆಗದುಕೊಳ್ಳೋಕೆ ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ?” ಎಂದರು
ಇದೇ ವೇಳೆ, ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಅಮಾನವೀಯ ಅಂತ್ಯಸಂಸ್ಕಾರ ಮಾಡಿರುವ ಕುರಿತು ಮಾತನಾಡಿದ ಖಾದರ್, “ಅಧಿಕಾರಿಗಳ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ” ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. “ಆರೋಗ್ಯರ ಸಚಿವರ ಜಿಲ್ಲೆ ಎಂದು ಬಳ್ಳಾರಿಯ ಅಧಿಕಾರಿಗಳಿಗೆ ರಿಯಾಯಿತಿ ಕೊಡಲಾಗಿದ್ಯಾ..?” ಎಂದು ಕೇಳಿದ ಅವರು, ಈ ಪ್ರಕರಣದ ಕುರಿತು ರಾಜ್ಯ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.