ಬೆಂಗಳೂರು: ಕೊರೊನಾ ಸೋಂಕಿನ ಆತಂಕದ ನಡುವೆಯೇ ಪದವಿ ಪೂರ್ವ ಶಿಕ್ಷಣ ಇಲಾಖೆ ಗುರುವಾರ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ನಡೆಸಿತ್ತು. ಇದೀಗ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ಸೋಂಕು ತಗಲಿರುವುದು ದೃಢವಾಗಿದೆ.
ಬೆಂಗಳೂರಿನ ಜೆಪಿ ನಗರದ ವ್ಯಕ್ತಿಗೆ ಸೋಂಕು ತಗಲಿತ್ತು. ಆ ವ್ಯಕ್ತಿಯ ಮಗಳಾದ ವಿದ್ಯಾರ್ಥಿನಿ ಕ್ವಾರಂಟೈನ್ ನಲ್ಲಿದ್ದರೂ ಪರೀಕ್ಷೆ ಬರೆದಿದ್ದು ಈಗ ಆಕೆಗೆ ಸೋಂಕು ಹರಡಿರುವುದು ಬೆಳಕಿಗೆ ಬಂದಿದೆ. ಆದರೆ ಈ ಸೋಂಕು ವಿದ್ಯಾರ್ಥಿನಿಗೆ ಮೊದಲೇ ಇತ್ತಾ ಅಥವಾ ಪರೀಕ್ಷೆ ಬರೆದ ನಂತರ ಬಂದಿರುವುದೇ ಎಂಬ ಸಂಶಯಗಳುಗೆ ಇನ್ನು ನಿಖರತೆ ಸಿಕ್ಕಿಲ್ಲ. ಹೀಗಾಗಿ ವಿದ್ಯಾರ್ಥಿನಿಯೊಂದಿಗೆ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳಿಗೂ, ಪರೀಕ್ಷಾ ಸಿಬ್ಬಂದಿಗಳಿಗೂ ಮತ್ತು ಆಕೆಯ ಸಂಪರ್ಕ ಮಾಡಿದ ಎಲ್ಲರಿಗೂ ಇದು ಅಪಾಯವನ್ನು ತಂದೊಡ್ಡುವ ಪರಿಸ್ಥಿತಿಯಾಗಿದೆ.
ಇನ್ನು ಕೆಲವೆಡೆ ಪರೀಕ್ಷೆಯ ಬಳಿಕ ಸೋಂಕು ಕಾಣಿಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿದ್ದು ಹೆಚ್ಚಿನ ಅಂಕಿ ಅಂಶಗಳು ದೊರೆತಿಲ್ಲ.