ಇಂದಿರಾ ಕ್ಯಾಂಟೀನಲ್ಲಿ 14 ದಿನಗಳ ಕಾಲ ಉಚಿತ ಆಹಾರ

0
178
Tap to know MORE!

ಲಾಕ್ಡೌನ್ ಇರುವ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಕೂಲಿ ಕಾರ್ಮಿಕರಿಗೆ, ವಲಸಿಗರಿಗೆ, ದುರ್ಬಲ ವರ್ಗದವರಿಗೆ ಉಚಿತ ಆಹಾರ ನೀಡಲಾಗುತ್ತಿದೆ.

ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟವನ್ನು ಉಚಿತ ನೀಡಲಾಗುತ್ತಿದ್ದು, ಇದು ಬಿಬಿಎಂಪಿ ಹೊರತು ಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ ನ್ ಗೆ ಅನ್ವಯವಾಗಲಿದೆ. ಈ ಯೋಜನೆಗೆ ಸಿಎಂ ಅನುಮತಿ ಪಡೆಯಲಾಗಿದೆ. ಈ ಬಗ್ಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here