ಇಂದಿರಾ ಕ್ಯಾಂಟೀನ್ ಮುಚ್ಚಲು ಸರಕಾರದ ಚಿಂತನೆ

0
151
Tap to know MORE!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ 191 ಮತ್ತು ರಾಜ್ಯದ 184 ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿನ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಲು ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ಗುಣಮಟ್ಟದ ಕೊರತೆ, ಕಡಿಮೆ ಪ್ರಮಾಣದ ಆಹಾರ, ಅಸ್ವಚ್ಛತೆ ಹಾಗೂ ಸುಳ್ಳು ಲೆಕ್ಕಾಚಾರಗಳಿಂದ ಹಣ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಕಾರಣಕ್ಕಾಗಿ ಸರಕಾರ ಕ್ಯಾಂಟೀನ್ ಮುಚ್ಚುವ ಬಗ್ಗೆ ಚಿಂತನೆ ನಡೆಸಿದೆ.

ಬಂದ್ ಮಾಡಿದರೆ ಆ ಹಣವನ್ನು ಪಡಿತರ ವಿತರಣೆಗೆ ಬಳಸಲು ಮತ್ತು ಕ್ಯಾಂಟೀನ್ ಕಟ್ಟಡಗಳನ್ನು ಬಾಡಿಗೆಗೆ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕ್ಯಾಂಟೀನ್ ಬಳಕೆಯನ್ನು ಲಾಭದಯಕವಾಗಿಸುವುದು ಹೇಗೆಂಬುದರ ಕುರಿತು ವರದಿ ನೀಡುವಂತೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here