ಇಂದು ‘ಇಂಡಿಯಾ ಗ್ಲೋಬಲ್ ವೀಕ್’ ನಲ್ಲಿ ಮೋದಿ ಭಾಷಣ

0
161
Tap to know MORE!

ಇಂದು ಮಧ್ಯಾಹ್ನ 1.30 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು “ಇಂಡಿಯಾ ಗ್ಲೋಬಲ್ ವೀಕ್ 2020″ಯ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಇದರಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 5,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತದ ಜಾಗತೀಕರಣದ ಅತಿದೊಡ್ಡ ಅಂತರರಾಷ್ಟ್ರೀಯ ಘಟನೆಗಳಲ್ಲಿ ಇದು ಒಂದಾಗಿರಲಿದೆ. ಮೂರು ದಿನಗಳ ಈ ವರ್ಚುವಲ್ ಈವೆಂಟ್ ನ ವಿಷಯ “ಬಿ ದಿ ರಿವೈವಲ್: ಇಂಡಿಯಾ ಅಂಡ್ ಎ ಬೆಟರ್ ನ್ಯೂ ವರ್ಲ್ಡ್” ( ಪುನರುಜ್ಜೀವನ – ಭಾರತ ಮತ್ತು ಹೊಸ ಉತ್ತಮ ಜಗತ್ತು). ಇದು ಜಾಗತಿಕ ಆರ್ಥಿಕತೆಗೆ ಮತ್ತೊಮ್ಮೆ ಪುಟಿದೇಳಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸುಮಾರು 250 ಭಾಷಣಕಾರರು ಭೌಗೋಳಿಕ ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಹಣಕಾಸು, ಫಾರ್ಮಾ, ರಕ್ಷಣಾ ಮತ್ತು ಭದ್ರತೆ ಮತ್ತು ಕಲೆ ಮತ್ತು ಸಂಸ್ಕೃತಿಯ ಕುರಿತು ವರ್ಚುವಲ್ ಮೀಟ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಭೆಯಲ್ಲಿ ಭಾಗವಹಿಸುವ ಇತರ ಉನ್ನತ ಭಾಷಣಕಾರರಲ್ಲಿ ಪ್ರಧಾನ ಮಂತ್ರಿ ಕ್ಯಾಬಿನೆಟ್ ಸಹೋದ್ಯೋಗಿಗಳಾದ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು, ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಮತ್ತು ಆಧ್ಯಾತ್ಮಿಕ ಮುಖಂಡ ಶ್ರೀ ಶ್ರೀ ರವಿಶಂಕರ್ ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಿದೇಶದಿಂದ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಮತ್ತು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಭಾರತದ ಯುಎಸ್ ರಾಯಭಾರಿ ಕೆನ್ ಜಸ್ಟರ್ ಮತ್ತು ಇತರರು ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here