ದಕ್ಷಿಣ ಕನ್ನಡದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾದಂತೆ, ಸೋಂಕಿಗೆ ಬಲಿಯಾದವರ ಸಂಖ್ಯೆಯೂ ಏರುತ್ತಿದೆ. ಇಂದು ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 24ಕ್ಕೆ ಏರಿದೆ.
ಮೃತ ಪುರುಷ ಮಂಗಳೂರಿನ ತೊಕ್ಕೊಟ್ಟು ಬಳಿಯ ಸಂತೋಷನಗರ ನಿವಾಸಿ ಆಗಿದ್ದರೆ, ಮಹಿಳೆಯು ಉಳ್ಳಾಲ ಮೂಲದವರಾಗಿದ್ದಾರೆ. ವಿಪರ್ಯಾಸವೆಂದರೆ, ಮೃತ ಮಹಿಳೆ ಹಾಗೂ ಪುರುಷ ಇಬ್ಬರ ವಯಸ್ಸು 52!
ಮೃತ ಪುರುಷನು ಹೃದಯ ಸಂಬಂಧಿ ಖಾಯಿಲೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ ಹಾಗೂ ಮಹಿಳೆಯ ಬಗ್ಗೆ ಸ್ಪಷ್ಟ ಮಾಹಿತಿ ಇನ್ನು ಸಿಗಬೇಕಿದೆ. ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕ್ರೋನವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿದೆ. (22 ಕೋವಿಡ್ ಮತ್ತು 2 ಸಹಜ ಸಾವು)
ಜುಲೈ 6 ರ ಭಾನುವಾರದ ಜಿಲ್ಲಾ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ 147 ಹೊಸ ಸೋಂಕಿತರ ವರದಿಯಾಗಿದ್ದು, ಈವರೆಗೆ ಒಟ್ಟು 1,232 ಸೋಂಕಿತರ ಪತ್ತೆಯಾಗಿದ್ದಾರೆ. ಈ ಪೈಕಿ 666 ಪ್ರಕರಣಗಳು ಸದ್ಯ ಸಕ್ರಿಯವಾಗಿದೆ.