ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 21 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.
ಇಂದು ಮತ್ತು ನಾಳೆ ಪ್ರಧಾನಿ ಎಲ್ಲಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅವರು ಇಂದು ಕೊರೋನವೈರಸ್ ಪೀಡಿತ ರಾಜ್ಯಗಳ ಸಿಎಂಗಳೊಂದಿಗೆ ಸಂವಾದ ನಡೆಸಲಿದ್ದಾರೆ ಹಾಗೂ ನಾಳೆ, ಜೂನ್ 17 ರಂದು, ಅತ್ಯಂತ ಹೆಚ್ಚು ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಿದ್ದಾರೆ.
ಕೇರಳ, ಪಂಜಾಬ್, ಉತ್ತರಾಖಂಡ, ಜಾರ್ಖಂಡ್, ಗೋವಾ, ಸಿಕ್ಕಿಂ, ಹಿಮಾಚಲ ಪ್ರದೇಶ, ತ್ರಿಪುರಾ ಮುಖ್ಯಮಂತ್ರಿಗಳು ಸೇರಿದಂತೆ 21 ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಇಂದು ಸಂವಹನ ನಡೆಸಲಿದ್ದಾರೆ.
ಇಂದು ಪ್ರಧಾನಮಂತ್ರಿಯವರೊಂದಿಗೆ ಸಭೆಯಲ್ಲಿ ಭಾಗವಹಿಸಲಿರುವ ರಾಜ್ಯಗಳ ಪೂರ್ಣ ಪಟ್ಟಿ ಹೀಗಿದೆ:
1. ಪಂಜಾಬ್
2. ಕೇರಳ
3. ಉತ್ತರಾಖಂಡ
4. ಹಿಮಾಚಲ ಪ್ರದೇಶ
5. ಲಡಾಖ್
6. ಜಾರ್ಖಂಡ್
7. ಛತ್ತೀಸ್ಗಢ
8. ಚಂಡೀಗಢ
9. ತ್ರಿಪುರ
10. ಅಸ್ಸಾಂ
11. ಮಣಿಪುರ
12. ಮಿಜೋರಾಂ
13. ನಾಗಾಲ್ಯಾಂಡ್
14. ಮೇಘಾಲಯ
15. ಸಿಕ್ಕಿಂ
16. ಅರುಣಾಚಲ ಪ್ರದೇಶ
17. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
18. ಲಕ್ಷದ್ವೀಪ
19. ದಾದ್ರಾ, ನಗರ ಹಾವೇಲಿ ಮತ್ತು ದಮನ್ ಡಿಯು
20. ಪುದುಚೇರಿ
21. ಗೋವಾ
ಕೋರೋನಾ ಸಾಂಕ್ರಾಮಿಕ ರೋಗಕ್ಕೆ ಭಾರತದ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 13 ರಂದು ಹಿರಿಯ ಸಚಿವರು, ಗೃಹ ಸಚಿವರು ಮತ್ತು ಆರೋಗ್ಯ ಸಚಿವರು ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ವಿವರವಾದ ಸಭೆ ನಡೆಸಿದ್ದರು.
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದಾಗಿದೆ. ಮಾರ್ಚ್ 2020 ರಲ್ಲಿ ಕೊರೋನವೈರಸ್ ಸ್ಫೋಟಗೊಂಡ ನಂತರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಯವರ 6 ನೇ ಸಭೆ ಇದಾಗಿದೆ.