ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

0
188
Tap to know MORE!

ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

“ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ” ಎಂದು ಪ್ರಧಾನಿ ಕಚೇರಿಯು ನಿನ್ನೆ ಟ್ವೀಟ್ ಮಾಡಿತ್ತು.

ಆದರೆ, ಪ್ರಧಾನಿಯು ಭಾರತ-ಚೀನಾ ಗಡಿ ಉದ್ವಿಗ್ನತೆ ಅಥವಾ ದೇಶದ ಕೊರೊನಾವೈರಸ್ ಪರಿಸ್ಥಿತಿ ಕುರಿತು ಮಾತನಾಡುತ್ತಾರೆಯೇ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಅದೇ ರೀತಿ, ಭಾರತೀಯ ಜನತಾ ಪಕ್ಷವೂ ಇಂದು ಅದರ ಕುರಿತು ಟ್ವೀಟ್ ಮಾಡಿದ್ದರೂ, ವಿಷಯದ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ.

LEAVE A REPLY

Please enter your comment!
Please enter your name here