ಇನ್ನು ಮುಂದೆ ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿಯೂ ಪಡೆಯಬಹುದು!

0
60
Tap to know MORE!

ನವದೆಹಲಿ: ಇದುವರೆಗೆ ಇಂಜಿನಿಯರಿಂಗ್ ಅಂದ್ರೆ ಸಾಕು, ಇಂಗ್ಲೀಷ್ ಸೇರಿದಂತೆ ಇತರ ಕೆಲ ಭಾಷೆಗಳಲ್ಲಿ ಮಾತ್ರವೇ ಕಲಿಕೆಗೆ ಅವಕಾಶ ಎನ್ನುವಂತೆ ಆಗಿತ್ತು. ಆದ್ರೇ ಇದೀಗ ಕನ್ನಡದಲ್ಲಿಯೂ ನೀವು ಇಂಜಿನಿಯರಿಂಗ್ ಕೋರ್ಸ್, ಪರೀಕ್ಷೆ ಬರೆಯಬಹುದಾಗಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) 2020-21ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿಯೂ ಇಂಜಿನಿಯರಿಂಗ್ ಪದವಿ ವ್ಯಾಸಂಗಕ್ಕೆ ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಕನ್ನಡ ಭಾಷೆಯಲ್ಲಿಯೂ ಕಲಿಯೋದಕ್ಕೆ ಅವಕಾಶ ಸಿಕ್ಕಂತೆ ಆಗಿದೆ.

ಶಿಕ್ಷಣ ನಮ್ಮ ಅಂತಃಶಕ್ತಿಯನ್ನು ಮುನ್ನಡೆಸುತ್ತದೆ: ಸ್ವಾಮಿ ಮಹಾಮೇಧಾನಂದಜಿ

ಇನ್ನೂ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡೋದಕ್ಕೆ ಅಷ್ಟೇ ಅಲ್ಲದೇ, ಹಿಂದಿ, ತಮಿಳು, ಮಲಯಾಳಂ, ಗುಜರಾತಿ, ಬಂಗಾಳಿ ಸೇರಿದಂತೆ 8 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ವ್ಯಾಸಂಗ ಮಾಡಲು ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡೋದಕ್ಕೆ ಬಯಸುವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here