ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಮತ ಎಣಿಕೆ ಸಾಮಾನ್ಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇವಿಎಂಗಳ ಸಂಖ್ಯೆಯಲ್ಲಿ ಶೇಕಡಾ 63 ರಷ್ಟು ಹೆಚ್ಚಳವಾಗಿರೋದ್ರಿಂದ, ಮತ ಎಣಿಕೆ ಕಾರ್ಯ ಇಂದು ತಡರಾತ್ರಿಯವರೆಗೆ ಮುಂದುವರಿಯುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಆಯೋಗದ ಅಧಿಕಾರಿಗಳು, ಮೂರು ಹಂತದ ಚುನಾವಣೆಯಲ್ಲಿ ಮತದಾನ ಮಾಡಿದ ಸುಮಾರು 4.16 ಕೋಟಿ ಮತಗಳಲ್ಲಿ ಮಧ್ಯಾಹ್ನ 1.30 ರವರೆಗೆ 1 ಕೋಟಿ ಮತಗಳನ್ನು ಮಾತ್ರ ಎಣಿಸಲಾಗಿದೆ ಎಂದು ಹೇಳಿದರು. ಎಣಿಕೆ ಇಲ್ಲಿಯವರೆಗೆ ಪಾರದರ್ಶಕಗಿದೆ ಎಂದು ಅಧಿಕಾರಿ ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಾಮಾಜಿಕ ಅಂತರದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು, ಆಯೋಗವು 2015 ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಸುಮಾರು 65,000 ಮತದಾನ ಕೇಂದ್ರಗಳ ಸಂಖ್ಯೆಯನ್ನು 1.06 ಲಕ್ಷಕ್ಕೆ ಹೆಚ್ಚಿಸಿತ್ತು. ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ(ಇವಿಎಂ) ಸಂಖ್ಯೆಯ ಹೆಚ್ಚಳವೂ ಆಗಿದೆ.