ಇಸ್ರೋ: EOS-01 ಸೇರಿದಂತೆ 10 ಉಪಗ್ರಹಗಳನ್ನು ಹೊತ್ತಿದ PSLV-C49 ಉಡಾವಣೆ ಯಶಸ್ವಿ

0
155
Tap to know MORE!

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಯಶಸ್ವಿ ಉಡಾವಣೆ ಕೈಗೊಂಡಿದ್ದು, ಭೂ ವೀಕ್ಷಣಾ ಉಪಗ್ರಹ ಇಒಎಸ್-01 ಸೇರಿದಂತೆ 10 ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ಎಲ್ ವಿ ಸಿ49 ಯಶಸ್ವಿ ಉಡಾವಣೆಯಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಮಧ್ಯಾಹ್ನ ಪಿಎಸ್ಎಲ್ ವಿ ಸಿ49 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಇದನ್ನೂ ಓದಿ: ಇನ್ನು ಮುಂದೆ ವಾಟ್ಸಾಪ್ ಮೂಲಕವೇ ಹಣವನ್ನು ಪಾವತಿಸಿ!

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ ಡಿಎಸ್ ಸಿ) ಎಸ್ ಆರ್ ಎಚ್ ಆರ್ ನಿಂದ 9 ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹಕವು ತನ್ನ 51ನೇ ಮಿಷನ್ (ಪಿಎಸ್ ಎಲ್ ವಿ-ಸಿ49) ಇಓಎಸ್-01 ಅನ್ನು ಪ್ರಾಥಮಿಕ ಉಪಗ್ರಹವಾಗಿ  ಉಡಾವಣೆ ಮಾಡಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ 2020ರ ನವೆಂಬರ್ 7ರಂದು ಉಡಾವಣೆಯನ್ನ ತಾತ್ಕಾಲಿಕವಾಗಿ 1502 Hrs IST ನಲ್ಲಿ ನಿಗದಿಮಾಡಲಾಗಿದೆ’ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಭಾರತದ ಪಿಎಸ್ ಎಲ್ ವಿ-ಸಿ49 ಹಯು EOS-01 ಅನ್ನ ಪ್ರಾಥಮಿಕ ಉಪಗ್ರಹವಾಗಿ  ಒಂಬತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಉಡಾವಣೆ ಮಾಡಿದೆ.

ಕೊರೋನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿತ್ತು. ಇದೀಗ ಭೂ ವೀಕ್ಷಣಾ ಉಪಗ್ರಹ ಇಒಎಸ್-01ನ ಉಡಾವಣೆ ಮೂಲಕ ಮತ್ತೆ ಇಸ್ರೋ ಅಂತರಿಕ್ಷ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.

LEAVE A REPLY

Please enter your comment!
Please enter your name here