ತನು ಎಲೆಕ್ಟ್ರಿಕಲ್ಸ್ ಹಾಗೂ ತೋಕೂರು ಸ್ಪೋರ್ಟ್ಸ್ ಕ್ಲಬ್ ಸಹಕಾರದಲ್ಲಿ ಉಚಿತ ವಿದ್ಯುತ್ ಸಂಪರ್ಕದ ವ್ಯವಸ್ಥೆ

0
925
Tap to know MORE!

ತೋಕೂರು: ವಿದ್ಯುತ್ ಸಂಪರ್ಕವಿಲ್ಲದೆ ಅನೇಕ ವರ್ಷಗಳಿಂದ ಕತ್ತಲಲ್ಲಿ ದಿನ ಕಳೆಯುತ್ತಿದ್ದ ಎಸ್ ಕೋಡಿಯ ಶ್ರೀಮತಿ ಗೋಪಿ ಅವರ ಮನೆಗೆ ತನು ಎಲೆಕ್ಟ್ರಿಕಲ್ಸ್ ,ಕಿನ್ನಿಗೋಳಿ ಇದರ ಮಾಲಕರಾದ ಶ್ರೀ ಅಜಿತ್ ಕೆರೆಕಾಡು ಅವರ ಸಹಕಾರದಿಂದ, ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕದ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಶ್ರೀ ಅಜಿತ್ ಕೆರೆಕಾಡು ಅವರು ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀ ವಿನೋದ್ ಕುಮಾರ್ ಬೊಳ್ಳೂರು ಅವರು ಕ್ಲಬ್ ನ ವತಿಯಿಂದ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ಕನೆಯ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಒದಗಿಸುತ್ತಿರುವ ಈ ಸಮಾಜ ಮುಖಿ ಕಾರ್ಯಕ್ಕೆ ಹಾಗೂ ಸಮಾಜದ ಹಿಂದುಳಿದ ಜನರು ಮುಖ್ಯವಾಹಿನಿಗೆ ಬರುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಸ್ಪೋರ್ಟ್ ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ತೋಕೂರಿನಲ್ಲಿ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ

ಶ್ರೀ ಕಿರಣ್ ಸಾಲ್ಯಾನ್ ಬಜ್ಪೆ ಅವರು, ಬಡವರ್ಗದ ಜನರ ಜೀವನ ಮಟ್ಟ ಸುಧಾರಣೆಯ ಗುರಿಯನ್ನಿಟ್ಟುಕೊಂಡು ಆಪಾತ್ಬಂದವ ಸಂಸ್ಥೆಯಾಗಿ ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಸಮಾಜ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂಸ್ಥೆಯ ಮಾರ್ಗದರ್ಶಕರಾದ ಶ್ರೀ ರಾಮಣ್ಣ ದೇವಾಡಿಗ ಮುಂಬೈ, ಶ್ರೀ ರಮೇಶ್ ಅಮೀನ್ ಮುಂಬೈ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಸದಸ್ಯರು ಶ್ರೀ ಸಂತೋಷ್ ಕುಮಾರ್, ಮಾಜಿ ಸದಸ್ಯೆ ಶ್ರೀಮತಿ ಸಂಪಾವತಿ, ಕ್ಲಬ್ ನ ಅಧ್ಯಕ್ಷರಾದ ಶ್ರೀ ಸಂತೋಷ್ ದೇವಾಡಿಗ,ಉಪಾಧ್ಯಕ್ಷ ಶ್ರೀ ದೀಪಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಶ್ರೀ ಜಗಧಿಶ್ ಕುಲಾಲ್,ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ್ ಕುಮಾರ್ ಬೇಕಲ್,ಶ್ರೀಮತಿ ಪ್ರಮೀಳಾ. ಕೆ. ದೇವಾಡಿಗ, ಕ್ರಿಕೆಟ್ ತಂಡದ ನಾಯಕ ಶ್ರೀ ಗೌತಮ್ ಬೆಲ್ಚೆಡ್, ಸದಸ್ಯರಾದ, ಶ್ರೀ ಪದ್ಮನಾಭ ಶೆಟ್ಟಿ, ಶ್ರೀ ಚಂದ್ರಶೇಖರ ದೇವಾಡಿಗ, ಶ್ರೀ ರಮೇಶ್ ಕರ್ಕೇರ, ಅರ್ಫಾಜ್, ಶ್ರೀ ದೀಪಕ್ ದೇವಾಡಿಗ, ಮಹಿಳಾ ಸದಸ್ಯೆಯರಾದ ಶ್ರೀಮತಿ ಸುರೇಖಾ, ಶ್ರೀಮತಿ ಸುಜಾತಾ. ಜಿ. ಕೆ, ಶ್ರೀಮತಿ ಕವಿತಾ ನಾಗೇಶ್, ಮಾ.ಭವಿಶ್, ಮಾ.ಲತೀಶ್, ಮಾ.ಆಯುಷ್, ಮನೆಯವರಾದ ಶ್ರೀಮತಿ ಗೋಪಿ, ಶ್ರೀ ದಾಮೋದರ್, ಕುಮಾರಿ ಅಶ್ವಿತ, ಕುಮಾರಿ ಅಂಬಿಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here