ಉಡುಪಿ: ರಾಜ್ಯಾದ್ಯಂತ ಲಾಕ್ ಡೌನ್ ತೆರವು ಮಾಡಲಾಗಿದೆ. ಅದೇ ಮಾರ್ಗಸೂಚಿ ಮಯಂತೆ, ಉಡುಪಿಯಲ್ಲೂ ಕೆಲವಾರು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಸೀಲ್ ಮಾಡಲಾಗಿದ್ದ ಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಇಂದಿನಿಂದ ಜಿಲ್ಲಾದ್ಯಂತ ಬಸ್ ಓಡಾಟ ಆರಂಭಗೊಂಡಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೋರಲಾಗಿದೆ. ಬಸ್ ನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಇರುತ್ತದೆ ಮತ್ತು ಮಾಸ್ಕ್, ಸ್ಯಾನಿಟೈಜರ್ ಕಡ್ಡಾಯ ಎಂದು ಇದೇ ವೇಳೆ ಜಿಲ್ಲಾಧಿಕಾರಿ ಹೇಳಿದರು.
ಕಾನೂನು ಮೀರಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಅದಲ್ಲದೆ ಜಿಲ್ಲೆಯೊಳಗೆ ಯಾರೂ ಅನಾವಶ್ಯಕ ಓಡಾಟ ಮಾಡಬೇಡಿ. ಜಿಲ್ಲಾ ಗಡಿಯಾಚೆಗೆ ತುರ್ತು ಅಗತ್ಯವಿದ್ದರೆ ಮಾತ್ರ ಓಡಾಟ ಮಾಡಬಹುದು ಎಂದರು.
ಈ ಹಿಂದಿನಂತೆಯೇ ಗಡಿಯಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸಲಿದ್ದು, ಸ್ವಲ್ಪ ಸಡಿಲಿಕೆ ಮಾಡಿದ್ದೇವೆ. ಅನಾವಶ್ಯಕವಾಗಿ ಓಡಾಡಿ ಕೊರೋನ ಹರಡದಿರಿ ಎಂದು ಉಡುಪಿ ಡಿ.ಸಿ ಜಿ. ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.