ಉಡುಪಿಯ ಜನತೆಗೆ ಕಾಡುತ್ತಿದೆ ಸಂಶಯ!

0
192
Tap to know MORE!

ಕೊರೋನಾ ಮಹಾಮಾರಿ ಭಾರತದ ಮೂಲೆ ಮೂಲೆಗೂ ಪಸರಿಸುತ್ತಿದೆ. ಹಸಿರು, ಹಳದಿ ವಲಯಗಳು ಕೇವಲ ಹೆಸರಿಗಷ್ಟೇ ಎಂಬಂತಿದೆ. ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆ, ಇಂದು ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆಯಾಗಿ ಮಾರ್ಪಟ್ಟಿದೆ. ಇದನ್ನು ಕಂಡು ಉಡುಪಿ ಜನತೆ ಮಾತ್ರವಲ್ಲದೆ, ರಾಜ್ಯವೇ ತತ್ತರಿಸಿ ಹೋಗಿದೆ.
ಇಡೀ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಮರಳಿದ್ದಾರೆ. ಅವರ ಪೈಕಿ ಕೆಲವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆದರೆ ಉಡುಪಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಜನರಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕೊರೋನಾ ವಿಚಾರದಲ್ಲಿ ಉಡುಪಿಯಲ್ಲಿ ಏನೋ ಷಡ್ಯಂತ್ರ ನಡೀತಿದೆ ಎಂದು ಹಲವರಲ್ಲಿ ಸಂದೇಹ ಮೂಡಿದೆ! ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮ ಅನುಭವಗಳನ್ನು, ಅಭಿಪ್ರಾಯಗಳನ್ನು ಹಂಚುತ್ತಿದ್ದಾರೆ. “ಮೂವರಲ್ಲಿ ಪಾಸಿಟಿವ್ ಇದೆ ಎಂದು ಕರೆದೊಯ್ಯಲು ಬಂದಾಗ, ರಿಪೋರ್ಟ್ ಕೊಡಿ ಎಂದ ಕೂಡಲೇ ತಟ್ಟನೆ ರಿವರ್ಸ್ ಹೋದ ಆಂಬುಲೆನ್ಸ್, ವಾಪಸ್ ಬರಲೇ ಇಲ್ಲ” ಎಂದು ಒಬ್ಬರು ತಮ್ಮ ಫೇಸ್ಬುಕ್ನಲ್ಲಿ ಹಾಕಿದ್ದಾರೆ. ಅದೇ ರೀತಿ ಮತ್ತೊಬ್ಬರು, ಉಡುಪಿಗಿಂತ ಜಾಸ್ತಿ ಜನರು ದಕ್ಷಿಣ ಕನ್ನಡ ಜಿಲ್ಲೆಗೆ ಮಹಾರಾಷ್ಟ್ರದಿಂದ ಮರಳಿದ್ದಾರೆ. ಆದರೆ, ಅವರಿಗೆ ಕಾಣಿಸದ ಸೋಂಕು, ಕೇವಲ ಈ ಜಿಲ್ಲೆಯವರಲ್ಲಿ ಹೇಗೆ ? ಎಂದು ಪ್ರಶ್ನಿಸಿದ್ದಾರೆ.
ಪಾಸಿಟಿವ್ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಮೂರ್ನಾಲ್ಕು ದಿನಗಳಲ್ಲಿ ವರದಿ ನೆಗೆಟಿವ್ ಎಂದು ಮನೆಗೆ ಕಳುಹಿಸುತ್ತಿದ್ದಾರೆ. ಯಾರಲ್ಲೂ ಸೋಂಕು ಸೀರಿಯಸ್ ಆಗಿಲ್ಲ. ಈ ಭಯ ಹುಟ್ಟಿಸುವ ಕೆಲಸ ಯಾಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಇನ್ನೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯನ್ನು ಹರಿಬಿಟ್ಟಿದ್ದಾರೆ.
ಹೀಗೆಲ್ಲಾ ಜನರು ಆಡಿಕೊಳ್ಳುತ್ತಿದ್ದರೂ, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು ಏನನ್ನೂ ಹೇಳುತ್ತಿಲ್ಲ. ಯಾವುದು ಸತ್ಯ, ಯಾವುದು ಮಿಥ್ಯ ಎಂಬುವುದು ಯಾರಿಗೂ ಗೊತ್ತಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ.

LEAVE A REPLY

Please enter your comment!
Please enter your name here