ಉಡುಪಿ: ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಸಭೆ

0
891
Tap to know MORE!

ಉಡುಪಿ : ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲಾ ಘಟಕದ ಸಭೆಯು ಉಡುಪಿ ಹಾಗೂ ದ. ಕ. ಜಿಲ್ಲಾ ವೀಕ್ಷಕರಾದ ಶ್ರೀ ಅಶೋಕ್ ಎಡಮಲೆಯವರ ಘನ ಉಪಸ್ಥಿತಿಯಲ್ಲಿ ಉಡುಪಿಯ ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.

ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರಗಳ ಹಾಗೂ ಜಿಲ್ಲಾ ಮಟ್ಟದ ವಿವಿಧ ಘಟಕಗಳ ಕಾರ್ಯಕರ್ತರನ್ನು ಉದ್ದೇಶಿಸಿ ಶ್ರೀ ಅಶೋಕ್ ಎಡಮಲೆಯವರು ಮಾರ್ಗದರ್ಶನ ನೀಡಿದರು.

ದ್ವಿತೀಯ ಪಿಯು ರಿಸಲ್ಟ್; ರಾಜ್ಯದಲ್ಲೇ ದಾಖಲೆಯ ಫಲಿತಾಂಶ ಪಡೆದ ಆಳ್ವಾಸ್

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವೇದಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ಉಡುಪಿ ಜಿಲ್ಲಾ ನಾಯಕರಾದ ಶ್ರೀ ಸುರೇಶ್ ಭಂಡಾರಿ, ಅಲ್ಫ್ರೇಡ್ ಲೋಬೊ, ಮಹಮ್ಮದ್ ಪೆರ್ಡೂರ್, ರಾಜ್ಯ ವಿದ್ಯಾರ್ಥಿ ಘಟಕದ ನಾಯಕರಾದ ಅಬ್ದುಲ್ ರಜಾಕ್ ಮರ್ದಾಳ ಉಪಸ್ಥಿತರಿದ್ದು ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಘಟಕದ ಪ್ರಧಾನ ಸಂಘಟಕರಾದ ಆಶ್ಲೇ ಸಂತೆಕಟ್ಟೆ, ಜೈಕಿಶನ್ ಉಡುಪಿ, ಒಲಿವೆರ್ ಡಿ’ ಸೋಜಾ, ಮಂಜುನಾಥ್ ಭಟ್ ಹಾಗೂ ಸ್ಟೀಫನ್ ಆರ್ ಲೋಬೋ, ಸುದೀಪ್, ಅರುಣ್, ಮೋಹನ್ ಉಡುಪಿ ಮತ್ತು ವಿವಿಧ ಘಟಕಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಶ್ರೀ ಮಂಜುನಾಥ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಶ್ಲೇ ಸಂತೆಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here