ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಗತ್ಯ ಧಾರ್ಮಿಕ ಆಚರಣೆಗಳ ಪ್ರಕಾರ, ಸೆಪ್ಟೆಂಬರ್ 10 ಮತ್ತು 11 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಾಪಿಂಡಿ ಉತ್ಸವ ನಡೆಯಲಿದೆ. ಆದರೆ, ಉತ್ಸವದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಗೆ ಅನುಮತಿಯನ್ನು ಉಡುಪಿಯ ಜಿಲ್ಲಾಡಳಿತ ನಿರ್ಧರಿಸುತ್ತದೆ ಎಂದು ಅದಮಾರು ಮಠಾಧೀಶ ಶ್ರೀ ಈಶಪ್ರಿಯಾ ತೀರ್ಥ ಸ್ವಾಮೀಜಿ ಹೇಳಿದರು.
ಆಗಸ್ಟ್ 31 ರ ಸೋಮವಾರ ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ” ಸಾರ್ವಜನಿಕರು ಮತ್ತು ಭಕ್ತರು ಅಷ್ಟಮಿ ಆಚರಣೆಗಾಗಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಕಾಯುತ್ತಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ನೋಡಿ : ಜನ್ಮಾಷ್ಟಮಿಯಂದು ಹುಟ್ಟಿದ ಮಗುವಿಗೆ ಕೃಷ್ಣ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ!
“ಧಾರ್ಮಿಕ ಆಚರಣೆಗಳು ಮತ್ತು ಪೂಜೆಗಳು ಮತ್ತು ಶ್ರೀಕೃಷ್ಣನಿಗೆ ಪ್ರಾರ್ಥನೆ ಎಂದಿನಂತೆ ನಡೆಯಲಿದೆ. ಅತ್ಯಂತ ಮುಖ್ಯವಾದ ಆಚರಣೆ ‘ಅರ್ಘ್ಯ ಪ್ರದಾನ’ ಸೆಪ್ಟೆಂಬರ್ 10 ರಂದು ಮುಂಜಾನೆ 12.00 ರಿಂದ 12.16 ರವರೆಗೆ ನಡೆಯಲಿದೆ. ಈ ಆಚರಣೆಯನ್ನು ಮಠದಿಂದ ನೇರಪ್ರಸಾರ ಮಾಡಲಾಗುತ್ತದೆ” ಎಂದರು. “ದೇವಾಲಯದ ಒಳಗೆ (ಗರ್ಭ ಗುಡಿ) , ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, 30-40 ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಸಾಕಷ್ಟು ಸ್ಥಳವಿದೆ” ಎಂದು ಸ್ವಾಮೀಜಿ ತಿಳಿಸಿದ್ದಾರೆ.
“ನಾವು ಭಕ್ತರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ಅದಲ್ಲದೆ ನಿಯಮಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿಯೂ ಹೋಗಲು ಬಯಸುವುದಿಲ್ಲ. ಆದ್ದರಿಂದ ಆಚರಣೆಗಳು ಮತ್ತು ಜನರನ್ನು ಒಟ್ಟುಗೂಡಿಸುವ ನಿರ್ಧಾರವು ಜಿಲ್ಲಾ ಉಪ ಆಯುಕ್ತರಿಗೆ ಬಿಟ್ಟದ್ದು. ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ನಾವು ಬಯಸಿದ್ದೇವೆ ಮತ್ತು ಅದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ” ಎಂದು ಅವರು ತಿಳಿಸಿದರು.