ಉಡುಪಿ : ಕೊರೋನಾ ಭೀತಿಯಿಂದ ಕಾಪು ಮಾರಿ ರದ್ದು!

0
156
Tap to know MORE!

ಉಡುಪಿ : “ವಿಶ್ವಾದ್ಯಂತ ಕೊರೋನಾ ಎಲ್ಲೆಡೆ ಹಬ್ಬುತ್ತಲೇ ಇದೆ. ಎಲ್ಲಾ ಹಬ್ಬ-ಹರಿದಿನಗಳು, ನಿಯೋಜಿತ ಕಾರ್ಯಕ್ರಮಗಳು ರದ್ದುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಇದೀಗ ಪ್ರಸಿದ್ಧ ಕಾಪು ಮಾರಿ ಹಬ್ಬ ಈ ವರ್ಷ ರದ್ದಾಗಿದೆ. ಹಳೇ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ ಮತ್ತು ಕಲ್ಯ ಮಾರಿಯಮ್ಮ ದೇವಸ್ಥಾನಗಳಲ್ಲಿ ನಡೆಯುವ ಆಟಿ ಮಾರಿಪೂಜೆ ಹಾಗೂ ಕುರಿ, ಕೋಳಿ ಕಡಿಯುವ ಸಂಪ್ರದಾಯವನ್ನು ಈ ಬಾರಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾರಿಯಮ್ಮ ದೇವಸ್ತಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ ಶೆಣೈ ತಿಳಿಸಿದ್ದಾರೆ.

ಇಂದು ಮತ್ತು ನಾಳೆ ನಡೆಯಬೇಕಿದ್ದ ಆಟಿ ಮಾರಿ ಪೂಜೆಯನ್ನು ಈಗಾಗಲೇ ರದ್ದು ಗೊಳಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ದೇವಳದ ಸಮಿತಿ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಿ ಮಾರಿ ಪೂಜೆಯ ವಿಧಿ ವಿಧಾನಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಈ ನಿರ್ಣಯ ಮಾಡಲಾಗಿದ್ದು, ಭಕ್ತಾಭಿಮಾನಿಗಳ ಪರವಾಗಿ, ಅವರ ಆರೋಗ್ಯಕ್ಕಾಗಿ ಹಾಗೂ ಅವರ ಇಷ್ಠಾರ್ಥ ಈಡೇರಿಸುವಂತೆ ಆಡಳಿತ ಮಂಡಳಿ ಹಾಗೂ ಕಾಪು ಪೇಟೆಯ ಹತ್ತು ಸಮಸ್ತರು ಶ್ರೀದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಭಕ್ತಾದಿಗಳು ಮುಂದಿನ ವರ್ಷದ ಮಾರಿಪೂಜೆಗೆ ಆಗಮಿಸಿ ಸೇವೆ ಸಲ್ಲಿಸಬಹುದಾಗಿದೆ ಎಂದು ಪ್ರಸಾದ್ ಜಿ. ಶೆಣೈ ಮಾದ್ಯಮಕ್ಕೆ ತಿಳಿಸಿದ್ದಾರೆ.

(ಪಬ್ಲಿಕ್ ನೆಕ್ಸ್ಟ್ ವರದಿ)

LEAVE A REPLY

Please enter your comment!
Please enter your name here