ಉಡುಪಿ: ಕೊರೋನಾ ಶಂಕಿತ ಆತ್ಮಹತ್ಯೆಗೆ ಶರಣು!

0
169
Tap to know MORE!

ಉಡುಪಿಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ, 63 ವರ್ಷದ ಕೊರೋನವೈರಸ್ ಶಂಕಿತರೊಬ್ಬರು, ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜುಲೈ 5 ರಂದು ಅಜ್ಜರಕಾಡು ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ -19 ಶಂಕಿತರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.

ಆಸ್ಪತ್ರೆಗೆ ದಾಖಲಾದ ಒಂದು ದಿನದ ಬಳಿಕ ಅವರು ವಾರ್ಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಮೃತರನ್ನು ಪ್ರಭಾಕರ್ ಪುತ್ರನ್ ಎಂದು ಗುರುತಿಸಲಾಗಿದೆ. ಈ ಪ್ರಕರಣವನ್ನು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here