ತೆರೆಯಲು ಅನುಮತಿ ಸಿಕ್ಕರೂ, ಸದ್ಯಕ್ಕೆ ಸಿಗಲ್ಲ ಉಡುಪಿ ಶ್ರೀಕೃಷ್ಣನ ದರ್ಶನ!

0
208
Tap to know MORE!

ಉಡುಪಿ: ಕರ್ನಾಟಕ ಸರ್ಕಾರ ಜುಲೈ 5ರಿಂದ ಅನ್ವಯವಾಗುವಂತೆ ಅನ್‌ಲಾಕ್ ಮಾರ್ಗಸೂಚಿ ಪ್ರಕಟಿಸಿದೆ. ದೇವಾಲಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಅದರಲ್ಲೂ ಭಕ್ತರಿಗಂತೂ ದೇವಾಲಯದ ಬಾಗಿಲು ತೆರೆದಿರೋದು ಖುಷಿಯನ್ನು ಇಮ್ಮಡಿಗೊಳಿಸಿದೆ. ಆದರೆ ಉಡುಪಿಯ ಶ್ರೀ ಕೃಷ್ಣನನ್ನು ಕಾಣಲು ಇನ್ನೂ ಒಂದು ವಾರ ಕಾಯಲೇಬೇಕಿದೆ.

ಉಡುಪಿಯ ಕೃಷ್ಣಮಠ ಇನ್ನೂ ಒಂದು ವಾರಗಳ ಕಾಲ ತೆರೆಯುವುದಿಲ್ಲ ಎಂದು ಪರ್ಯಾಯ ಅದಮಾರು ಈಶಪ್ರೀಯ ತೀರ್ಥ ಸ್ವಾಮಿಜಿ ಹೇಳಿದ್ದಾರೆ. ಒಂದುವಾರ ಕೃಷ್ಣ ಮಠ ಭಕ್ತರಿಗೆ ತೆರೆಯೋದಿಲ್ಲ. ವಾರದ ನಂತರ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಮಾಡುತ್ತೇವೆ. ರಾಜ್ಯದ ಚಿತ್ರಣ ನೋಡಿಕೊಂಡು ಆನಂತರ ನಿರ್ಧರಿಸುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಅನ್ಲಾಕ್ ನಿಯಮಗಳನ್ನು ಇನ್ನಷ್ಟು ಸಡಿಲಿಸಿದ ರಾಜ್ಯ ಸರ್ಕಾರ | ದೇಗುಲಗಳು, ಮಾಲ್‌ಗಳನ್ನು ತೆರೆಯಲು ಅನುಮತಿ

ಅನ್‌ಲಾಕ್ 3.0ಗೆ ಸರ್ಕಾರ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ಶುಚಿಕಾರ್ಯ ಆರಂಭವಾಗಿದೆ.‌ ಆದರೆ ಉಡುಪಿಯ ಶ್ರೀ ಕೃಷ್ಣ ಮಾತ್ರ ಒಂದು ವಾರಗಳ ಕಾಲ ತಡವಾಗಿ ದರ್ಶನ ನೀಡೋದು ಭಕ್ತರಿಗೆ ನಿರಾಸೆ ಮೂಡಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸರ್ಕಾರ ದೇವಾಲಯಗಳ ಬಾಗಿಲು ತೆರೆಯಲು ಅವಕಾಶ ನೀಡಿದೆ. ಆದರೆ ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here