ಉತ್ತರ ಪ್ರದೇಶದಲ್ಲಿ 125 ದಿನಗಳ ಉದ್ಯೋಗ ಖಾತ್ರಿ ಯೋಜನೆ – ಇಂದು ಪ್ರಧಾನಿ ಮೋದಿಯವರಿಂದ ಉದ್ಘಾಟನೆ

0
140
Tap to know MORE!

ಕೊರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿರುವ ಉತ್ತರ ಪ್ರದೇಶದಲ್ಲಿನ ವಲಸೆ ಕಾರ್ಮಿಕರು ಮತ್ತು ಇತರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ 125 ದಿನಗಳ ಖಾತ್ರಿ ಉದ್ಯೋಗವನ್ನು ಒದಗಿಸುವ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಪ್ರಾರಂಭಿಸಲಿದ್ದಾರೆ.

ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದ ಅಂಗವಾಗಿ ಕೈಗೊಳ್ಳಲಾಗುತ್ತಿರುವ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ದೇಶದ ಆರು ರಾಜ್ಯಗಳ 116 ಜಿಲ್ಲೆಗಳಿಗೆ, ಈ ಉದ್ಯೋಗ ಅಭಿಯಾನವನ್ನು ಪ್ರಧಾನಿ ಜೂನ್ 20 ರಂದು ಪ್ರಾರಂಭಿಸಿದ್ದರು.

ಇಂದು ಬೆಳಿಗ್ಗೆ, ವರ್ಚುವಲ್ ಲಾಂಚ್‌ನಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ಆರು ಜಿಲ್ಲೆಗಳ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ.

ಉತ್ತರ ಪ್ರದೇಶದ ಉದ್ಯೋಗ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

  • ಉತ್ತರ ಪ್ರದೇಶದ ಗರೀಬ್ ಕಲ್ಯಾಣ್ ಯೋಜನೆಗೆ “ರೋಜರ್ ಕಾ ನಯಾ ಅಭಿಯಾನ್, ಹರ್ ಶ್ರಮಿಕ್ ಕೋ ಕಾಮ್” ‘(ಉದ್ಯೋಗಕ್ಕಾಗಿ ಹೊಸ ಅಭಿಯಾನ, ಎಲ್ಲಾ ಕಾರ್ಮಿಕರಿಗೆ ಉದ್ಯೋಗಗಳು) ಎಂಬ ಘೋಷಣೆ ನೀಡಲಾಗಿದ್ದು, ಇತ್ತೀಚಿಗೆ, ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭ, 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರ ರಾಜ್ಯಕ್ಕೆ ಮರಳಿದ್ದರು.
  • ಆತ್ಮನಿರ್ಭರ್ ರೋಜ್ಗಾರ್ ಅಭಿಯಾನದ ಮೂಲಕ ಉದ್ಯೋಗಗಳನ್ನು ಒದಗಿಸುವುದು, ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೈಗಾರಿಕಾ ಸಂಘಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಕೇಂದ್ರೀಕರಿಸಿದೆ.
  • ಉತ್ತರ ಪ್ರದೇಶದ 31 ಜಿಲ್ಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅಭಿಯಾನದ ವ್ಯಾಪ್ತಿಯಲ್ಲಿರುವ 31 ಜಿಲ್ಲೆಗಳೆಂದರೆ – ಸಿದ್ಧಾರ್ಥನಗರ, ಪ್ರಯಾಗರಾಜ್, ಗೊಂಡಾ, ಮಹಾರಾಜ್ ಗಂಜ್, ಬಹ್ರೈಚ್, ಬಲರಾಂಪುರ್, ಜೌನ್‌ಪುರ, ಹಾರ್ಡೊಯ್, ಅಜಮ್‌ಗಢ್, ಬಸ್ತಿ, ಗೋರಖ್‌ಪುರ್, ಸುಲ್ತಾನಪುರ, ಕುಶಿನಗರ, ಸಂತ ಕಬೀರ್ ನಗರ, ಬಂಡಾ, ಅಂಬೇದ್‌ಕೂರ್, ಪ್ರತಾಪ್‌ಗಢ್, ರಾಯ್ ಬರೇಲಿ, ಅಯೋಧ್ಯೆ, ಡಿಯೋರಿಯಾ, ಅಮೆಥಿ, ಲಖಿಂಪುರ್ ಖೇರಿ, ಉನ್ನಾವೊ, ಶ್ರಾವಸ್ತಿ, ಫತೇಪುರ್, ಮಿರ್ಜಾಪುರ, ಜಲಾನ್ ಮತ್ತು ಕೌಶಂಬಿ.
  • 25 ವಿಭಾಗಗಳಾಗಿ ವಿಂಗಡಿಸಿ, ವಿವಿಧ ಇಲಾಖೆಗಳಿಗೆ ಕೆಲಸ ನೀಡುವ ಗುರಿಯನ್ನು ನೀಡಲಾಗಿದ್ದು, 1.25 ಕೋಟಿ ಕಾರ್ಮಿಕರಿಗೆ ಕೆಲಸ ಸಿಗಲಿದೆ.
  • ಇದರಲ್ಲಿ ದಿನಕ್ಕೆ 60 ಲಕ್ಷ ಕಾರ್ಮಿಕರಿಗೆ ನೀಡಬೇಕಾದ ಕೆಲಸಗಳು ಸೇರಿವೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 10.06 ಕೋಟಿ ಮಾನವ ದಿನಗಳನ್ನು ರಚಿಸಲಾಗುವುದು.
  • ಸಮಾರಂಭದಲ್ಲಿ 2.40 ಲಕ್ಷ ಕೈಗಾರಿಕಾ ಘಟಕಗಳಿಗೆ 5,900 ಕೋಟಿ ರೂ. ಮತ್ತು 1.11 ಲಕ್ಷ ಹೊಸ ಕೈಗಾರಿಕಾ ಘಟಕಗಳಿಗೆ 3,226 ಕೋಟಿ ರೂ. ವಿತರಿಸಲಾಗುವುದು.
  • ಕಾರ್ಯಕ್ರಮದಲ್ಲಿ ಖಾಸಗಿ ನಿರ್ಮಾಣ ಸಂಸ್ಥೆಗಳಿಂದ 1.25 ಲಕ್ಷ ಕಾರ್ಮಿಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಇದು ವಿಶ್ವಕರ್ಮ ಶ್ರಮ ಸಮ್ಮಾನ್ ಯೋಜನೆ ಮತ್ತು ಒಂದು ಜಿಲ್ಲೆ-ಒಂದು-ಉತ್ಪನ್ನ ಯೋಜನೆಯಡಿ 5,000 ಕಾರ್ಮಿಕರಿಗೆ ‘ಟೂಲ್ ಕಿಟ್’ ವಿತರಣೆಯೂ ಸಹ ನಡೆಯಲಿದೆ.

LEAVE A REPLY

Please enter your comment!
Please enter your name here