ಉತ್ತರ ಪ್ರದೇಶ: ಹೆಣದ ಮೇಲಿನ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನ!

0
210
Tap to know MORE!

ಉತ್ತರ ಪ್ರದೇಶ(ಮೇ.10): ಕೊರೋನಾ ವೈರಸ್‌ಗೆ ಪ್ರತಿ ದಿನ ದೇಶದಲ್ಲಿ ಸಾವಿನ ಸಂಖ್ಯೆ 4,000ಕ್ಕೂ ಹೆಚ್ಚಾಗುತ್ತಿದೆ. ಹೀಗಾಗಿ ಶವಾಗಾರ, ಸ್ಮಶಾನಗಳು ಫುಲ್ ಆಗಿದೆ. ಶವಗಳನ್ನು ಸುಡುಲ ಸಾಧ್ಯವಾಗದೆ ಆ್ಯಂಬುಲೆನ್ಸ್‌ನಲ್ಲೇ ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಕೆಲ ಕಟುಕ ಕಿರಾತಕರು ಇನ್ನು ಶವಗಳನ್ನು ವ್ಯಾಪಾರ ಮಾಡೋದೊಂದೇ ಬಾಕಿ. ಅಲ್ಲೀಯವರಿಗೆ ಪರಿಸ್ಥಿತಿ ಬಂದು ನಿಂತಿದೆ.

ಉತ್ತರ ಪ್ರದೇಶದ ಭಾಗ್‌ಪಟ್‌ನಲ್ಲಿ ಹೆಣದ ಬಟ್ಟೆ ಕದ್ದು ವ್ಯಾಪಾರ ಮಾಡೋ ಕಳ್ಳರ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ. 7 ಮಂದಿಯ ಈ ಗ್ಯಾಂಗ್ ಶವಗಾರ, ಸ್ಮಶಾನಕ್ಕೆ ತೆರಳಿ ಹೆಣದ ಮೇಲಿದ್ದ ಬಟ್ಟೆಗಳನ್ನು ಕದ್ದೊಯ್ಯುತ್ತಿತ್ತು. ಹೆಣದ ಉಡುಪು, ಸ್ಯಾರಿ, ಬಟ್ಟೆ, ಹೊದಿಸಿದ್ದ ಬಟ್ಟೆಯನ್ನೂ ಬಿಡದೆ ಕದ್ದೊಯ್ಯುತ್ತಿದ್ದರು. ಹೀಗೆ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

ಉಡುಪಿ: ಹೋಂ ಕ್ವಾರಂಟೈನ್‌ನಲ್ಲಿದ್ದ 12 ರ ಬಾಲಕಿ ಆತ್ಮಹತ್ಯೆ!

7 ಮಂದಿ ಚಾಲಾಕಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಇವರ ಕಳ್ಳತನ ಹಿಸ್ಟರಿ ಬಯಲಾಗಿದೆ. ಈ ರೀತಿಯ ಕದ್ದ ಬಟ್ಟೆಗಳನ್ನು ಇಸ್ತ್ರಿ ಹಾಕಿ ಮತ್ತೆ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 520 ಬೆಡ್‌ಶೀಟ್, 127 ಕುರ್ತಾ, 52 ಬಿಳಿ ಸ್ಯಾರಿ, ಬಿಳಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಿಶೇಷ ಅಂದರೆ ಅರೆಸ್ಟ್ ಆಗಿರುವ ಎಲ್ಲಾ 7 ಮಂದಿ ಒಂದೇ ಕುಟುಂಬದವರು. ಕಳೆದ 10 ವರ್ಷದಿಂದ ಹೊರಗೆ ಹಾಕಿದ್ದ ಬಟ್ಟೆ , ಪ್ರಮುಖ ವಸ್ತುಗಳನ್ನು ಕದಿಯುತ್ತಿದ್ದರು. ಆದರೆ ಸದ್ಯ ಲಾಕ್‌ಡೌನ್, ಕರ್ಫ್ಯೂ ಕಾರಣ ಹೊರಗೆ ಬರುವಂತಿಲ್ಲ. ಹೀಗಾಗಿ ಶವಾಗಾರಕ್ಕೆ ತೆರಳಿ ಶವಗಳ ಮೇಲಿನ ಬಟ್ಟೆ ಕದಿಯುತ್ತಿದ್ದರು.

LEAVE A REPLY

Please enter your comment!
Please enter your name here