ಉದಯ

0
135

ಮೂಡಣದಲ್ಲಿ ಮೂಡಿ
ಎಲ್ಲರ ಮಾಡುವೆ ಮೋಡಿ ನಿನ್ನಂದವ ನಾ ನೋಡಿ
ಕವನ ಬರೆದೆ ಹಾಗೆ ಹಾಡಿ

ಹಕ್ಕಿಗಳ ನಾದದಲಿ ಉದಯಿಸುವೆ
ಇಡೀ ಜಗವನ್ನೇ ಬೆಳಗುವೆ ಮುಂಜಾನೆ ಆದರೆ ಅರಳುವೆ ಸಂಧ್ಯಾ ಕಾಲಕ್ಕೆ ಮರೆಯಾಗುವೆ

ಇಡೀ ಮನುಕುಲಕ್ಕೆ ನೀನೆ ಆಧಾರ
ಇಡೀ ಜಗದಲ್ಲಿ ನಿನ್ನ ಸಂಚಾರ ಮೊಳಗಿತು ನಿನ್ನಿಂದ ಹಕ್ಕಿಗಳ ಇಂಚರ
ಅವುಗಳಿಗೆ ಇಲ್ಲದಿದ್ದರೆ ಬೇಸರ

ಬೆಳಗೋ ನಿನಗಿಲ್ಲ ಅಂಧಕಾರ ಬೆಳಗೋ ನಿನಗಿಲ್ಲ ಜಾತಿಭೇದ ಬೆಳಗೋ ನಿನಗಿಲ್ಲ ಅಹಂಕಾರ ಬೆಳಗೋ ನಿನಗಿಲ್ಲ ಧರ್ಮ ಬೇಧ

ರವಿ, ಭಾನು, ಸೂರ್ಯ ಎಂದು ನಾಮ ಹಲವು
ಗಿಡ ಮರಬಳ್ಳಿಗೆ ನೀನಿದ್ದರೆ ಒಲವು ಬಲವು
ದಿಗಂತಕ್ಕೆ ನೀನು ತಾನೇ ಗೆಲುವು ನೀನೇ ಜೀವರಾಶಿಗೆ ಸಕಲವು

-ಗಿರೀಶ್ ಪಿ.ಎಂ

LEAVE A REPLY

Please enter your comment!
Please enter your name here