ತೋಕೂರು ಜ:4: ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಗ್ರಾಮ ಪಂಚಾಯತ್ ಪಡುಪಣಂಬೂರು ವ್ಯಾಪ್ತಿಯ, ಬೆಳ್ಳಾಯರು ಗ್ರಾಮದ, ಕಲ್ಲಾಪು ಮಾಗಂದಡಿಯ ಪೆರಂಬೊರು ರಾಜ ಕಾಲುವೆಯ ಬಳಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟುವಿಗೆ ಕೃಷಿಕರ ಅನುಕೂಲಕ್ಕಾಗಿ ನೀರು ಉಳಿಸುವ ಉದ್ದೇಶದಿಂದ ಅಡ್ಡ ಹಲಗೆಗಳನ್ನು ಹಾಕಲಾಯಿತು.
ಇದನ್ನೂ ಓದಿ: ತೋಕೂರು: ಶ್ರೀ ಸುಬ್ರಹ್ಮಣ್ಯ ಸಭಾಭವನದ ಭೋಜನ ಶಾಲೆ ಸಮರ್ಪಣೆ| ದಾನಿಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಮಾಜಿ ಅಧ್ಯಕ್ಷರು ಶ್ರೀ ಮೋಹನ್ ದಾಸ್, ಸದಸ್ಯೆ ಶ್ರೀಮತಿ ಕುಸುಮ ಚಂದ್ರಶೇಖರ್, ಸಂಸ್ಥೆಯ ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಉಪಾಧ್ಯಕ್ಷರು ಶ್ರೀ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ತೋಕೂರು ಇದರ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ಸಂಸ್ಥೆಯ ಮಾಜಿ ಗೌರವ ಅಧ್ಯಕ್ಷರು ಶ್ರೀ ಯೋಗೀಶ್ ಕೋಟ್ಯಾನ್,ಕಾರ್ಯದರ್ಶಿ ಶ್ರೀ ಜಗಧೀಶ್ ಕುಲಾಲ್, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ, ಸಂಸ್ಥೆಯ ಕ್ರಿಕೆಟ್ ತಂಡದ ನಾಯಕ ಶ್ರೀ ಗೌತಮ್ ಬೆಲ್ಚಡ್, ಸಂಸ್ಥೆಯ ಮಾಜಿ ಅಧ್ಯಕ್ಷರು ಶ್ರೀ ರತನ್ ಶೆಟ್ಟಿ,ಮಾಜಿ ಯೋಧರು ಹಾಗೂ ಸಂಸ್ಥೆಯ ಸದಸ್ಯರು ಶ್ರೀ ವಿಜಯ್ ಕುಮಾರ್, ಸದಸ್ಯರಾದ ಶ್ರೀ ಧರ್ಮಾನಂದ ಶೆಟ್ಟಿಗಾರ್, ಶ್ರೀ ದೀಪಕ್ ದೇವಾಡಿಗ, ಅರ್ಫಾಜ್, ಶ್ರೀ ಸಂದೀಪ್ ಕುಲಾಲ್, ಶ್ರೀ ಹರ್ಷಿತ್ ಕುಮಾರ್, ಹಾಗೂ ಮಾಸ್ಟರ್ ದಿಗಂತ್ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಶುದ್ಧ ಪರಿಸರ ಮತ್ತು ಆರೋಗ್ಯಯುತ ಸಮಾಜ ಕಟ್ಟಲು ಎಲ್ಲರ ಸಹಕಾರ ಅಗತ್ಯ : ಶ್ರೀ ಚಂದ್ರಶೇಖರ್ ದೇವಾಡಿಗ