ಉಪಚುನಾವಣೆ : ಫಲಿತಾಂಶ ಹೊರಬೀಳುವ ಮುನ್ನವೇ ಸಿಎಂ ಬಿಎಸ್‌ವೈ ಸಂಭ್ರಮಾಚರಣೆ!

0
85
Tap to know MORE!

ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಇಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಸಂತಸದಲ್ಲಿದ್ದಾರೆ.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರನ್ನು ಸಚಿವ ಆರ್‌ ಅಶೋಕ್ ಹಾಗೂ ಇತರ ಸಚಿವರು, ಮುಖಂಡರು ಭೇಟಿಯಾಗಿ ಹೂಗುಚ್ಚ ಹಾಗೂ ಸಿಹಿ ನೀಡಿ ಶುಭಾಶಯ ಸಲ್ಲಿಸಿದರು. ಆರ್ ಆರ್‌ ನಗರ ಹಾಗೂ ಶಿರಾದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ.

ಇದನ್ನೂ ಓದಿ: ಅಯೋಧ್ಯೆ: ದೀಪೋತ್ಸವಕ್ಕೆ ಭರದ ಸಿದ್ಧತೆ | ಇಡೀ ನಗರವನ್ನು ಬೆಳಗಿಸಲಿದೆ 5 ಲಕ್ಷಕ್ಕೂ ಅಧಿಕ ಹಣತೆ!

ಆರ್‌ ಆರ್‌ ನಗರದಲ್ಲಿ 13 ನೇ ಸುತ್ತು ಮುಕ್ತಾಯಗೊಂಡಿದ್ದು ಬಿಜೆಪಿ ಅಭ್ಯರ್ಥಿ ಮುನಿರತ್ನ 69,484 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 36,299 ಮತಗಳನ್ನು ಪಡೆದುಕೊಂಡರೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೇವಲ 3,906 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಮುನಿರತ್ನ 33,299 ಮತಗಳ ಅಂತರದಲ್ಲಿ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ.

ಆರ್‌ ಆರ್‌ ನಗರದಲ್ಲಿ 1,12,167 ಮತಗಳ ಎಣಿಗೆ ಪೂರ್ಣಗೊಂಡಿದೆ. ಮುನಿರತ್ನ ನಿರಂತರವಾಗಿ ಭಾರೀ ಅಂತರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನತ್ತ ಸಾಗುತ್ತಿದ್ದಾರೆ. ಆದರೆ ಕಾಂಗ್ರೆಸ್ ಆರ್‌ ಆರ್‌ ನಗರದಲ್ಲಿ ಭಾರೀ ಹಿನ್ನೆಡೆಯನ್ನು ಅನುಭವಿಸಿದೆ.

LEAVE A REPLY

Please enter your comment!
Please enter your name here