‘ನಾನು ಈ ರಾಜ್ಯದ ಸಿಎಂ ಆಗಬೇಕು, ಗೆಲ್ಲಿಸ್ತೀರಾ?’ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ ರಿಯಲ್ ಸ್ಟಾರ್ ಉಪೇಂದ್ರ

0
208
Tap to know MORE!

ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡು ಪ್ರಜಾಕೀಯ ಪಕ್ಷದ ಚಿಂತನೆಗಳನ್ನು ಜನರ ಮುಂದಿಟ್ಟಿದ್ದಾರೆ ರಿಯಲ್ ಸ್ಟಾರ್. ನಾನು ಚುನಾವಣೆಯ ಕಣದಲ್ಲಿ ನಿಲ್ಲಲ್ಲ. ಸಿಎಂ ಅಂದರೆ ಕಾಮನ್ ಮ್ಯಾನ ಆಗಿ ನಿಮ್ಮ ಬೆಂಬಲಕ್ಕಿರತ್ತೇನೆ, ಪ್ರಜಾಕೀಯ ವಿಚಾರ ಧಾರೆಗಳನ್ನು ನೋಡಿ ಮತಗಳನ್ನು ನೀಡಿ, ಅವರಿಗೆ ಕೆಲಸ ಕೊಟ್ಟರೆ, ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಜನತೆಗೆ ಬೇಕಾದ ಕೆಲಸವನ್ನು ಪೈಸಾ-ಪೈಸಾ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.

ವರದಿ: ಸಿದ್ಧಾರ್ಥ್

ಪ್ರಜಾಪ್ರಭುತ್ವದಡಿಯಲ್ಲಿ ಜನ ಸಾಮಾನ್ಯರ ಕಷ್ಟ, ದುಃಖಗಳಿಗೆ ಸದಾ ಧ್ವನಿಯಾಗಿರುತ್ತೇನೆ ಎಂದು ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಿರ್ದೇಶಕ, ಸೂಪರ್ ಸ್ಟಾರ್ ಉಪೇಂದ್ರ ಹೇಳಿದರು.

ಕೊರೊನಾದ ಎರಡನೇ ಅಲೆಯ ಸಂದರ್ಭದಲ್ಲಿ ಜನರ ಕಷ್ಟದ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಪ್ರಜಾಕೀಯ ಪಕ್ಷ ಸ್ಥಾಪನೆಯಾದಾಗಿನಿಂದ ಹಾಗೂ ಚಲನಚಿತ್ರದ ಮೂಲಕ ಸಮಾಜದ ಇನ್ನೊಂದು ಮುಖ ವನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಚಲನಚಿತ್ರದ ಕಾರ್ಮಿಕರಿಗೆ ಸಹಾಯ ಹಸ್ತ ನೀಡಿದ್ದಾರೆ. ಈಗ ರೈತರಿಂದ ಬೆಳೆ ಖರೀದಿಸಿ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚುತ್ತಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮುಂಬರುವ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದಿಂದ ಸಾಮಾನ್ಯ ಜನರನ್ನು ಕಣಕ್ಕಿಳಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡುತ್ತೇನೆ. ಆಡಳಿತ ಹಾಗೂ ವಿರೋಧ ಪಕ್ಷದ ಜನರಿಗೆ ಏನೂ ಮಾಡದೇ ರಾಜಕೀಯ ಪಕ್ಷಗಳು ಸಂಪೂರ್ಣ ವಿಫಲವಾಗಿದೆ.

ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಖ್ಯಾತ ವ್ಯಕ್ತಿಗಳು ಮೇಲೆ ಹೇಳಿದ ಯಾವ ಶ್ರೇಷ್ಠತೆ ಇರೋ ನಾಯಕರು ನಿಲ್ಲಿಲ್ಲ, ದೊಡ್ಡ ನಾಯಕರನ್ನು ಕೊಡೋದು ರಾಜಕೀಯ!

ಪ್ರಜಾಕೀಯ ಪಕ್ಷದಲ್ಲಿ ಸಾಮಾನ್ಯ ಜನರಿಗೆ ಟಿಕೆಟ್ ಕೊಡುವುದು, ಪ್ರಜಾಕೀಯ ಪಕ್ಷದ ಗೆದ್ದ ಅಭ್ಯರ್ಥಿಗಳು ಹಣ, ಆಸೆ, ಅಧಿಕಾರ ದಾಹ, ಆಮಿಷಗಳಿಗೆ ಬೇರೆ ಪಕ್ಷದ ಜೊತೆ ಕೈ ಜೋಡಿಸಿದರೆ ಜನಸಾಮಾನ್ಯರ ಜತೆ ಸೇರಿ ಅಂತ ಭ್ರಷ್ಟ ಪ್ರತಿನಿಧಿ ರಾಜೀನಾಮೆ ನೀಡುವ ತನಕ ಹೋರಾಟ ಮಾಡಿ ಈ ವ್ಯವಸ್ಥೆ ಸರಿಹೋಗೊಕೆ ಸರಿಯಾದ ಕಾನೂನಿನ ಮೂಲಕ ಸರಿಪಡಿಸುತ್ತೆನೆಂದು ಹೇಳಿದರು.

LEAVE A REPLY

Please enter your comment!
Please enter your name here