ಉಳ್ಳಾಲದ ಒಂದೇ ಮನೆಯ 12 ಸದಸ್ಯರಿಗೆ ಕೊರೋನಾ

0
143
Tap to know MORE!

ಉಳ್ಳಾಲದ ಒಂದೇ ಮನೆಯಲ್ಲಿ ವಾಸಿಸುವ ಕುಟುಂಬದ 12 ಸದಸ್ಯರಲ್ಲೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಗ್ರಾಮದ ನಿವಾಸಿಗಳು ಆಘಾತಕ್ಕೊಳಗಾಗಿದ್ದಾರೆ.

ಕುಟುಂಬದ ಮಹಿಳಾ ಸದಸ್ಯರೊಬ್ಬರಲ್ಲಿ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕು ಕಂಡು ಬಂದಿದ್ದರಿಂದ, ಮನೆಗೆ ಸೀಲ್ ಹಾಕಲಾಗಿತ್ತು ಮತ್ತು ಮನೆಯ ಎಲ್ಲಾ ಸದಸ್ಯರು ಕ್ವಾರಂಟೈನ್ ನಲ್ಲಿದ್ದರು. ಇದೀಗ ಮನೆಯ 12 ಇತರರಲ್ಲೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಒಂದು ಕುಟುಂಬದಲ್ಲಿ 17 ಸದಸ್ಯರಿದ್ದು, ಅದರಲ್ಲಿ 13 ಸದಸ್ಯರು ಈಗ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.

ಉಳ್ಳಾಲದ ಮಾಸ್ತಿಕಟ್ಟೆ ಪ್ರದೇಶಕ್ಕೆ ಸೀಲ್ ಹಾಕಲಾಗಿದೆ. ಸುದ್ದಿ ತಿಳಿದ ನೆರೆಹೊರೆಯ ಜನರು ಆಘಾತಕ್ಕೊಳಗಾಗಿದ್ದಾರೆ. ಈ ಪ್ರದೇಶದ ಎಲ್ಲಾ ನಿವಾಸಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಈ ಹಿಂದೆಯೇ ಶಾಸಕ ಯು ಟಿ ಖಾದರ್ ಸೂಚಿಸಿದ್ದರು.

ಉಳ್ಳಾಲದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ಇರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here