ಉಳ್ಳಾಲ ನ 1 : ಎರಡು ದಿನಗಳಿಂದ ನಾಪತ್ತೆಯಾಗಿದ್ದ ಉಳ್ಳಾಲದ ಹಿರಿ ಜೀವ ಪಲ್ಲಿಯಬ್ಬ ಯಾನೆ ಪಲ್ಲಿಯಾಕ ರವರ ಮೃತ ಶರೀರ ಇರಾ ಸಮೀಪದ ಗುಡ್ಡವೊಂದರಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು . ಕೊಲೆ ಮಾಡಿ ಅವರ ದೇಹವನ್ನು ಗುಡ್ಡದಲ್ಲಿ ಹೂತು ಹಾಕಲಾಗಿದೆ ಎಂಬ ಶಂಕೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ .
ದಕ್ಷಿಣಕನ್ನಡ ಜಿಲ್ಲೆಯ ಉಲ್ಲಾಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್ ಅರಸ್ತಾನದ ಮನೆಯಿಂದ ಪಲ್ಲಿಯಬ್ಬರವರು ಎರಡು ದಿನದ ಹಿಂದೆ ನಾಪತ್ತೆಯಾಗಿದ್ದರು. ಗುರುವಾರ ಸಂಜೆಯ ಬಳಿಕ ಕಾಣೆಯಾದ ಇವರ ಮೊಬೈಲ್ ಶುಕ್ರವಾರ ಮಧ್ಯಾಹ್ನದವರೆಗೂಚಾಲ್ತಿ ಸ್ಥಿಯಲ್ಲಿದ್ದು ಬಳಿಕ ಸ್ವಿಚ್ಡ್ ಆಫ್ ಆಗಿತ್ತು. ಇದು ಅವರನ್ನು ಕುಟುಂಬಸ್ಥರನ್ನು ಆತಂಕಕ್ಕೆ ತಳ್ಳಿತ್ತು. ಸಂಶಯಗೊಂಡ ಪಲ್ಲಿಯಬ್ಬ ಅವರ ಸಂಬಂಧಿಕರು ಇಬ್ಬರು ಶಂಕಿತರನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
1.5 ಲಕ್ಷ ರೂ.ಗಳ ಹಣದ ವಿಚಾರಕ್ಕೆ ಸಂಭಂದಿಸಿದಂತೆ ಗಾಂಜಾ ವ್ಯಸನಿಗಳ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಗಾಂಜಾಮತ್ತರಾಗಿದ್ದ ತಂಡವೂ ಕಂಚಿನಡ್ಕ ಪ್ರದೇಶದಲ್ಲಿ ಇವರ ಕೊಲೆ ನಡೆಸಿ ಬಳಿಕ ಇರಾ ಪದವು ಬಳಿ ಹೂತಿದ್ದರು ಎಂದು ಹೇಳಲಾಗುತ್ತಿದೆ. ಭಾನುವಾರ ಮುಂಜಾನೆ ಇರಾ ಪ್ರದೇಶದ ಪದವು ಬಳಿ ಶವ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಂಟ್ವಾಳ ಹಾಗೂ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.