5 ನಿಮಿಷ ಉಷ್ಟ್ರಾಸನದಲ್ಲಿ ನಿಂತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರಿನ 5ರ ಬಾಲೆ!

0
543
Tap to know MORE!

ಮಂಗಳೂರು: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಮಂಗಳೂರಿನ ವಿನಂತಿ ಹರಿಕಾಂತ ದಾಖಲೆ ಬರೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸಾಧನೆಗೆ ವಯಸ್ಸಿನ ಹಂಗಿಲ್ಲ ಎನ್ನುವುದಕ್ಕೆ ಅದೆಷ್ಟೋ ನಿದರ್ಶನಗಳನ್ನು ನಾವು ಗಮನಿಸುತ್ತೇವೆ. ಸಣ್ಣ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಅನೇಕರು ಎಲ್ಲರ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಮಂಗಳೂರಿನ 5ರ ಪೋರಿಯೊಬ್ಬಳು ಸೇರ್ಪಡೆಗೊಂಡಿದ್ದಾಳೆ. ಮಂಗಳೂರಿನ 5ರ ಬಾಲಕಿ ವಿನಂತಿ ಹರಿಕಾಂತ ಯೋಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಿನಂತಿ ಹರಿಕಾಂತ ಅವರು ಪಡೆದಿರುವ ಪ್ರಮಾಣ ಪತ್ರ

ರಾಜಸ್ಥಾನದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಸ ಗುಡಿಸುತ್ತಿದ್ದ ಮಹಿಳೆ!

ವಿನಂತಿ ಹರಿಕಾಂತ ತನ್ನ 5ನೇ ವಯಸ್ಸಿನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ಈಕೆ ಸಣ್ಣಂದಿನಿಂದಲೇ ಯೋಗಾಸನದಲ್ಲಿ ಆಸಕ್ತಿ ಹೊಂದಿದ್ದು, 100ಕ್ಕಿಂತ ಹೆಚ್ಚಿನ ಯೋಗಾಸನ ಭಂಗಿಗಳನ್ನು ಸರಾಗವಾಗಿ ಮಾಡುತ್ತಾಳೆ. ಇದೀಗ `ಉತ್ರಾಸನ ಭಂಗಿ’ಯಲ್ಲಿ ದೀರ್ಘ ಕಾಲದವರೆಗೆ ಅಂದರೆ 5 ನಿಮಿಷ, 15 ಸೆಕೆಂಡ್ ಕಾಲ ತಟಸ್ಥವಾಗಿ ಉಳಿದು ಅದ್ಭುತ ಸಾಧನೆಯನ್ನು ಮಾಡಿದ್ದಾಳೆ. ಈಕೆಯ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನ ಗರಿಮೆಯ ಕಿರೀಟ ಮುಡಿಗೇರಿದೆ.

LEAVE A REPLY

Please enter your comment!
Please enter your name here