ಎಕ್ಸಾಮ್ ಹಾಲ್

0
177
Tap to know MORE!

ನಿಶ್ಚಲ ಮನಸಿನ ಚಿಂತಕರಿರುವರು
ದೇಶದ ಭಾವಿ ಪ್ರವರ್ತಕರಿರುವರು

ಗುಯ್ ಎಂದು ರಿಂಗಣಿಸಿದಾಗ ಬೆಲ್
ವಿದ್ಯಾರ್ಥಿಗಳ ಕೈಯ್ಯಲ್ಲಿ ಪ್ರಶ್ನೆ ಪತ್ರಿಕೆ

ಅದೇನೋ ಜೀವನದಲ್ಲಿ ಕಳಕೊಂಡ ಭಾವ
ಹೇಳತೀರದು ವಿದ್ಯಾರ್ಥಿಗಳ ಅತೀವ ನೋವ

ಕಂಡರೂ ಕಾಣದ ಪ್ರಶ್ನೆಗಳು?
ಅಗೋಚರವೆನಿಸುವ ಉತ್ತರಗಳು

ತರ್ಕಕ್ಕೆ ನಿಲುಕುದ ಶಬ್ಧಗಳೆಲ್ಲವೂ
ಪುಸ್ತಕದೊಳಗಿದ್ದರೂ ಮಸ್ತಕದೊಳಗಿಲ್ಲ..!

ಮನಸಿನ ಮೂಲೆಯಲ್ಲಿ ಗೋಚರಿಸುವ ಉತ್ತರ
ತಲೆಕೆಲಗಾದರೂ ಕೈಗೇ ಸಿಗುತ್ತಿಲ್ಲ ಕಾಣದ ಲೋಕದ ಪ್ರಶ್ನೆಗಳು

ಇದೆಲ್ಲದರ ಮಧ್ಯೆ ಅತಿಂದಿತ್ತ ಒದ್ದಾಡುವ ಇನ್ವಿಜಿಲೇಟರ್ಗಳು
ಶತ ಪ್ರಯತ್ನದಿ ನಿದ್ದೆಯ ಮಂಪರಿನಿಂದ ಜಯಗಳಿಸುತ್ತಿರುವರು

ಚೈತನ್ಯ ಪ್ರಕಾಶ್, ಪಂಜಿಬಲ್ಲೆ

LEAVE A REPLY

Please enter your comment!
Please enter your name here