ಅ.೧ ರಿಂದ ಪ್ಯಾಕ್ ಮಾಡದ ತಿನಿಸುಗಳಲ್ಲೂ ಇರಲಿದೆ “ಎಕ್ಸ್‌ಪೈರಿ ಡೇಟ್!”

0
154
Tap to know MORE!

ನವದೆಹಲಿ: ಇನ್ನು ಮುಂದೆ ಸಿಹಿತಿಂಡಿಗಳನ್ನು ಖರೀದಿಸುವಾಗ, ತಯಾರಕರು “ಎಕ್ಸ್‌ಪೈರಿ ದಿನಾಂಕ”ವನ್ನು ನಮೂದಿಸುವುದು ಕಡ್ಡಾಯವಾಗಿದೆ. ಅಕ್ಟೋಬರ್ 1 ರಿಂದ ಹೊಸ ನಿಯಮವು ಜಾರಿಗೆ ಬರಲಿದೆ. ಇದರರ್ಥ ಯಾವ ದಿನಾಂಕದವರೆಗೆ ತಿಂಡಿಯು ಖಾದ್ಯವಾಗಿ ಉಳಿಯುತ್ತದೆ ಎಂದು ಅಂಗಡಿಯವರು ಗ್ರಾಹಕರಿಗೆ ತಿಳಿಸಬೇಕು.

ತಿಂಡಿಗಳ ತಯಾರಿಕೆಯ ದಿನಾಂಕವನ್ನು ಬರೆಯುವುದು ಐಚ್ಜಿಕ, ಕಡ್ಡಾಯವಲ್ಲ ಎಂದು ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್ಎಸ್ಎಸ್ಎಐ) ಆದೇಶದಲ್ಲಿ ಹೇಳಿದೆ.

ಅಕ್ಟೋಬರ್ 1ರಿಂದ ಸ್ವೀಟ್​ ಸ್ಟಾಲ್​ಗಳಲ್ಲಿ ಅ.1ರಿಂದ ಹಳೆಯ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹೊಸ ನಿಯಮದ ಅಡಿಯಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಅಂಗಡಿಯವರು ತಮ್ಮ ಎಲ್ಲಾ ಉತ್ಪನ್ನಗಳಿಗೆ ಎಕ್ಸ್​ಪೈರಿ ಡೇಟ್​ ಹಾಕಬೇಕಾಗುತ್ತದೆ.

ಹೊಸ ನಿಯಮಗಳ ಪ್ರಕಾರ, ಅಂಗಡಿಗಳಲ್ಲಿನ ಸಿಹಿತಿಂಡಿಗಳ ಮೇಲೆ “ಬೆಸ್ಟ್ ಬಿಫೋರ್” ಬರೆಯುವುದು ಕಡ್ಡಾಯವಾಗಿರುತ್ತದೆ. ಅಂದರೆ, ಸ್ವೀಟ್​ಸ್ಟಾಲ್​ಗಳಲ್ಲಿ​ ತಯಾರಿಸಿ ಇಟ್ಟಿರುವ ಸಿಹಿ ಪದಾರ್ಥಗಳನ್ನು ಎಲ್ಲಿಯವರೆಗೆ ಬಳಸಬಹುದು ಎನ್ನುವುದನ್ನು ನಮೂದಿಸುವುದು ಕಡ್ಡಾಯ.

ಈ ನಿಯಮವು ಕೇವಲ ಪ್ಯಾಕ್ ಮಾಡದ ತಿಂಡಿಗಳಿಗೆ ಅನ್ವಯವಾಗುತ್ತದೆ. ಪ್ಯಾಕೇಜ್ ಮಾಡಿದ ಸಿಹಿತಿಂಡಿಗಳು, ಆಹಾರ ಪದಾರ್ಥಗಳಿಗೆ, ಉತ್ಪಾದನೆಯ ದಿನಾಂಕವನ್ನು ಮತ್ತು ಬಳಕೆಗೆ ಉತ್ತಮವಾದ ಅವಧಿ ಅಥವಾ ಎಕ್ಸ್‌ಪೈರಿ ದಿನಾಂಕವನ್ನು ಬರೆಯುವುದು ಕಡ್ಡಾಯವಾಗಿದೆ.

LEAVE A REPLY

Please enter your comment!
Please enter your name here