ಎಲ್ಲದರ ಗೆಲುವು ನಿನ್ನ ಒಲವಿನಿಂದಪ್ಪಾ….

0
204
Tap to know MORE!

ನಾನು ಮಗುವಾಗಿದ್ದಾಗ ನನ್ನ ಪುಟ್ಟ ಹೆಜ್ಜೆಗಳ ಆಧಾರ ನಿನ್ನ ಆ ತೋರು ಬೆರಳು ಅಲ್ವಾ ಅಪ್ಪ. ಇಂದು ನಾನು ಭವಿಷ್ಯದತ್ತ ಸಾಗುವ ನನ್ನ ದೃಢ ಹೆಜ್ಜೆಗಳಲ್ಲಿ ನಿನ್ನ ತೊರ್ ಬೆರಳು ಕೆಲವು ಬಾರಿ ಇಲ್ಲದಿದ್ದರು, ನೀ ತೋರಿದ ನಿಷಕಲ್ಮಶ ಪ್ರೀತಿ, ಹಲವು ಮಾರ್ಗದರ್ಶನ ನನ್ನ ಹಾದಿಗೆ ಗೆಲುವಿನ ನಂಬಿಕೆಯಾಗಿ ಪ್ರೇರಣೆ ನೀಡುತ್ತಿದೆ ಅಪ್ಪ.

ಕಾಣದ ನಿನ್ನ ಆ ನೋವಿನ ಬಾಲ್ಯ, ಅಮ್ಮ ಹೇಳಿದ ಚಂದಾಮಾಮನ ಕಥೆಯಾದರು, ಬಹಳ ಸಂದರ್ಭದಲ್ಲಿ ನನ್ನ ಮೂಢತನವನ್ನು ಅಳಿಸುವ ಬೆಳದಿಂಗಳಾಗಿ, ನನ್ನ ಬಯಕೆಯ ಮಿತಿಯನ್ನರಿಯುವ ಸ್ಫೂರ್ತಿಯಾಯಿತು.

ನಿನ್ನಲ್ಲಿ ತುಂಬಾ ಸ್ಪೆಶಲ್ ಅಂತ ಅನಿಸೊದು ನಿನ್ನ ಪ್ರತಿ ಆಚರಣೆ ಮತ್ತು ಅದರಿಂದಿರವ ಒಳ್ಳೆಯ ಉದ್ದೇಶ. ನನಗೆ ಗೊತ್ತಿರೋ ಹಾಗೆ ನನ್ನಪ್ಪ ಯವುದನ್ನು ಮಾತಿಂದ ಆದೇಶಿಸಲಿಲ್ಲ ನನಗೆ,ಪ್ರತಿಯಾಗಿ ಅವರು ತಮ್ಮ ಕೆಲಸದ ಮೂಲಕ ಸೂಚಿಸಿದ್ರು.’ ಮಕ್ಕಳು ನಮ್ಮ ಮಾತ ಕೆಳಲ್ಲ, ಆದರೆ ನಮ್ಮನ್ನ ಪಾಲನೆ ಮಾಡ್ತಾರೆ ‘ ಅನ್ನೋ ಮಾತನ್ನ ನಂಬಿರೊ ನಿನ್ನ ನಂಬಿಕೆನೆ ನನ್ನ ಇನ್ನುವರೆಗು ‘ಅಪ್ಪನ ಮಗಳು’ ಅನ್ನೋ ಹೆಗ್ಗಳಿಕೆಯ ನಗು ಬೀಗ್ ತಿರೋದು.
ಪ್ರತಿಯೊಂದರತ್ತ ನೀ ತೋರುವ ನೋಟಾನೆ ಅಪ್ಪ , ನಾನು ಜೀವನದ ಪ್ರತಿ ಸಂದರ್ಭ ಎದುರಿಸುವಾಗ ಮಾರ್ಗದರ್ಶನ ಮಾಡೋದು.

ನನ್ನ ಪ್ರತಿ ಕನಸು ಎಚ್ಚರವಾಗಿ ಪ್ರಯತ್ನದತ್ತ ಸಾಗೋದು ನಿನ್ನ ಒಂದ ಮಾತಿಂದಪ್ಪ,ನೀ ಯಾವಾಗ್ಲೂ ಹೇಳ್ತಿಯ “ಮನುಷ್ಯ ಆನೆಯಂತಿರ ಬೇಕು” ಬದುಕಿದ್ದಾಗು ಬೆಲೆ ಬಾಳಬೇಕು ಸತ್ತಾಗು ಬೆಲೆ ಬಾಳಬೇಕು ಅಂತ. ನಿನ್ನ ಈ ಒಂದು ಮಾತು ನನ್ನ ಎಲ್ಲಾ ಗುರಿಗೂ ಶಕ್ತಿ ತುಂಬುತ್ತೆ.

ಮೊದಲ ಗುರು ಅಮ್ಮ ಆದ್ರು , ನನ್ನ ಗುರಿಗೆ ಗುರು ನನ್ನಪ್ಪ.

ಎಲ್ಲಾ ಓದುಗರಿಗೂ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು ಅಪ್ಪ.

-ಪೆನಜ

LEAVE A REPLY

Please enter your comment!
Please enter your name here