ಎಲ್ಲಾ ‘ಜಯಂತಿ’ ರಜಾದಿನಗಳನ್ನು ರದ್ದುಗೊಳಿಸಿ: ಕರ್ನಾಟಕ ಸರ್ಕಾರಕ್ಕೆ ಸಲಹಾ ವರದಿ

0
190
Tap to know MORE!

ಶಿಕ್ಷಣದ ಕುರಿತು ಕರ್ನಾಟಕ ಸರ್ಕಾರದ ಸಲಹೆಗಾರರೊಬ್ಬರು ವಿದ್ಯಾರ್ಥಿಗಳಿಗೆ ಎಲ್ಲಾ ಜಯಂತಿ ಅಥವಾ ಜನ್ಮ ಸ್ಮಾರಕ ರಜಾದಿನಗಳನ್ನು ರದ್ದುಗೊಳಿಸಲು ಮತ್ತು ಅವುಗಳನ್ನು ಹೆಚ್ಚು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಬದಲಾಯಿಸಲು ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.

ಉನ್ನತ ಶಿಕ್ಷಣ ಮಂತ್ರಿಯಾಗಿರುವ, ರಾಜ್ಯದ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರಿಗೆ ತಮ್ಮ ವರದಿಯನ್ನು ಸಲ್ಲಿಸಿದ ಪ್ರೊಫೆಸರ್ ಎಂ.ಆರ್.ದೊರೆಸ್ವಾಮಿ ಅವರು, ಆ ಮಹಾನ್ ವ್ಯಕ್ತಿಗಳ ದಿನವನ್ನು ಆಚರಿಸಲು ವಿಷಯಾಧಾರಿತ ಕಾರ್ಯಾಗಾರಗಳು, ಉಪನ್ಯಾಸಗಳು, ಸಮಾವೇಶಗಳು ಮತ್ತು ಅಂತಹುದೇ ಚಟುವಟಿಕೆಗಳನ್ನು ಆಯೋಜಿಸಲು ಪ್ರಸ್ತಾಪಿಸಿದರು. ಕೇವಲ ರಜಾದಿನವನ್ನು ಘೋಷಿಸುವ ಬದಲು ಒಂದು ಹಬ್ಬದ ರೂಪದಲ್ಲಿ ದಿನವನ್ನು ಆಚರಿಸಲು ತಿಳಿಸಿದ್ದಾರೆ.

“ಇದು ನಮ್ಮ ಯುವಜನರಿಗೆ ನಮ್ಮ ಸಂಸ್ಕೃತಿ ಮತ್ತು ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಬಗ್ಗೆ ತಿಳುವಳಿಕೆ ನೀಡುವುದಲ್ಲದೆ, ನಮ್ಮ ನಾಗರಿಕ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳಿಗೆ ಗೌರವ ಸಲ್ಲಿಸುವ ಸಂಪ್ರದಾಯವನ್ನು ಪುನರುಜ್ಜೀವಗೊಳಿಸುತ್ತದೆ” ಎಂದು ಅವರು ಹೇಳಿದರು.

ಸಾರ್ವಜನಿಕ ರಜಾದಿನಗಳಾದ ವಾಲ್ಮೀಕಿ ಜಯಂತಿ, ಬಸವ ಜಯಂತಿ, ಕನಕ ಜಯಂತಿ, ಮಹಾವೀರ್ ಜಯಂತಿ, ಅಂಬೇಡ್ಕರ್ ಜಯಂತಿ, ಗಾಂಧಿ ಜಯಂತಿ ಇತ್ಯಾದಿ ದಿನಗಳಂದು ಸರ್ಕಾರಿ ರಜೆ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.

LEAVE A REPLY

Please enter your comment!
Please enter your name here