ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ, ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮತ್ತು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕೋವಿಡ್-19 ಭೀತಿಯಿಂದಾಗಿ ದೆಹಲಿ ವಿಶ್ವವಿದ್ಯಾಲಯ ಮತ್ತು ಇತರ ಕೇಂದ್ರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ.
ಪ್ರಧಾನಮಂತ್ರಿಗೆ ಪತ್ರ ಬರೆದಿರುವ ಕೇಜ್ರಿವಾಲ್ “ನಮ್ಮ ಯುವಕರ ಹಿತದೃಷ್ಟಿಯಿಂದ, ದೆಹಲಿ ವಿಶ್ವವಿದ್ಯಾಲಯ ಮತ್ತು ಇತರ ಕೇಂದ್ರ ಸರ್ಕಾರಿ ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪರೀಕ್ಷೆಗಳನ್ನು ,ನೀವೇ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ರದ್ದುಗೊಳಿಸಿ ಎಂದು ಗೌರವಾನ್ವಿತ ಪ್ರಧಾನಿಯನ್ನು ನಾನು ಕೋರುತ್ತೇನೆ” ಎಂದು ಕೇಳಿಕೊಂಡಿದ್ದಾರೆ.
ತನ್ನ ಪತ್ರದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ , ಆಯೋಗವು ತನ್ನ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿ ಮತ್ತು ಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಮತ್ತು ಯುಜಿಸಿಯನ್ನು ಒತ್ತಾಯಿಸಿದರು.
“ಐಐಟಿ ಮತ್ತು ಎನ್ಎಲ್ಯುನಂತಹ ಸಂಸ್ಥೆಗಳೇ ಈಗಾಗಲೇ ತಮ್ಮ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಪದವಿಗಳನ್ನು ನೀಡಿದ್ದರೆ, ಇತರ ವಿಶ್ವವಿದ್ಯಾಲಯಗಳು ಏಕೆ ಅದೇ ರೀತಿ ಮಾಡಲು ಸಾಧ್ಯವಿಲ್ಲ?” ಎಂದು ಮುಖ್ಯಮಂತ್ರಿ ಕೇಳಿದರು.
“ಸಾಂಕ್ರಾಮಿಕದ ಸಮಯದಲ್ಲಿ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳು ಪದವಿಗಳನ್ನು ನೀಡಿವೆ” ಎಂದು ಅವರು ಉಲ್ಲೇಖಿಸಿದರು.