ಸುಳ್ಯ ಕ್ಷೇತ್ರದ 6 ಬಾರಿಯ ಶಾಸಕ, ಎಸ್ ಅಂಗಾರ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅವರು ಇತ್ತೀಚೆಗಷ್ಟೇ, ಬೆಂಗಳೂರಿಗೆ ಹೋಗಿ ಬಂದಿದ್ದರು.
ಬೆಂಗಳೂರಿನಿಂದ ಹಿಂತಿರುಗಿದ ಇವರಿಗೆ ತಲೆನೋವು ಕಾಣಿಸಿಕೊಂಡಿತು. ಯಾವುದನ್ನೂ ನಿರ್ಲಕ್ಷಿಸದೆ, ಕೊರೋನಾ ಪರೀಕ್ಷೆಗೆ ಒಳಗಾದರು. ವರದಿಯು ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ : ತುಳು ಭಾಷೆಗೆ ಅಧಿಕೃತ ಸ್ಥಾನಮಾನ – ಮುಖ್ಯಮಂತ್ರಿಗೆ ಒತ್ತಾಯಿಸಿದ ನಾಯಕರು
ಅವರೊಂದಿಗೆ ಅವರ ಕಾರು ಚಾಲಕರಿಗೂ ಸೋಂಕು ದೃಢಪಟ್ಟಿದೆ. ಸಾಂಕ್ರಾಮಿಕದ ಕಾಲದಲ್ಲೂ ಸಮಾಜ ಸೇವೆಯಲ್ಲಿ ಇವರು ಸಕ್ರಿಯರಾಗಿದ್ದರು. ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಅವರೊಂದಿಗೆ ಸುಳ್ಯದ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.