ಎ.10ರಂದು ಮಂಗಳೂರು ವಿವಿ ಘಟಿಕೋತ್ಸವ – ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಮಿತಿ

0
285

ಮಂಗಳೂರು ವಿಶ್ವವಿದ್ಯಾನಿಲಯದ 39 ನೇ ಘಟಿಕೋತ್ಸವ ಏಪ್ರಿಲ್‌ 10 (ಶನಿವಾರ) ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಕೊರೋನಾ ಎರಡನೇ ಅಲೆಯ ಆತಂಕವಿರುವುದರಿಂದ ಕಾರ್ಯಕ್ರಮಕ್ಕೆ ಅರ್ಹ ವಿದ್ಯಾರ್ಥಿಗಳ ಹಾಜರಿಯನ್ನು ಮಿತಿಗೊಳಿಸಲು ತೀರ್ಮಾನಿಸಲಾಗಿದೆ.

ಮಾರ್ಚ್‌ 29 ರಂದು ಕುಲಪತಿಯವರ ಅಧ್ಯಕ್ಷತೆಯಲ್ಲಿ ವಿವಿಧ ನಿಕಾಯಗಳ ಡೀನ್‌ರು ಮತ್ತು ವಿಭಾಗ ಮುಖ್ಯಸ್ಥರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಘಟಿಕೋತ್ಸವದಲ್ಲಿ ಪಿ ಹೆಚ್‌.ಡಿ ಪದವಿ ಪಡೆಯುವವರು, ರ‍್ಯಾಂಕ್ ವಿಜೇತರು ಹಾಗೂ ಚಿನ್ನದ ಪದಕ ಪಡೆಯಲು ಅರ್ಹರಾದ ವಿದ್ಯಾರ್ಥಿಗಳು ಮಾತ್ರವೇ ಹಾಜರಾಗಬಹುದಾಗಿದ್ದು, ಉಳಿದ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಘಟಿಕೋತ್ಸವದ ಬಳಿಕ ಅಂಚೆಯ ಮೂಲಕ ಕಳುಹಿಸಿಕೊಡಲಾಗುವುದು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here