ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಅಗತ್ಯವಿದೆ: ದೆಹಲಿ ಹೈಕೋರ್ಟ್

0
132
Tap to know MORE!

ನವದೆಹಲಿ: ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗುವಂತೆ, ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್‌ ಪ್ರತಿಪಾದಿಸಿದೆ. ಅಲ್ಲದೆ ಈ ವಿಷಯವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮೀನಾ ಸಮುದಾಯಕ್ಕೆ ಹಿಂದು ವಿವಾಹ ಕಾಯ್ದೆ- 1955ಯ ಅನ್ವಯಿಸುವಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪ್ರತಿಭಾ ಎಂ ಸಿಂಗ್‌ ಅವರಿದ್ದ ಪೀಠ ಜು.7ರಂದು ಇಂಥದ್ದೊಂದು ಆದೇಶ ನೀಡಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ, ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆ ನೀಡಿತ್ತು. ಹೀಗಾಗಿ ಇದೀಗ ದೆಹಲಿ ಹೈಕೋರ್ಟ್‌ ನೀಡಿರುವ ಸೂಚನೆ, ಕಾಯ್ದೆ ಜಾರಿ ಕುರಿತ ಸರ್ಕಾರದ ಚಿಂತನೆಗಳಿಗೆ ಮರು ಜೀವ ನೀಡುವ ಸಾಧ್ಯತೆ ಇದೆ.

ಬಂದ್ ನಿಂದ ಆಗುವ ಆರ್ಥಿಕ ನಷ್ಟಕ್ಕೆ ಆಯೋಜಕರೇ ಹೊಣೆ : ಹೈಕೋರ್ಟ್

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೋರ್ಟ್‌ ಹೇಳಿದ್ದೇನು?

  • ಆಧುನಿಕ ಭಾರತದ ಸಮಾಜ ಹಂತಹಂತವಾಗಿ ಏಕರೂಪವಾಗುತ್ತಿದೆ
  • ಧಾರ್ಮಿಕ, ಸಮುದಾಯಿಕ, ಜಾತಿ ಸಾಂಪ್ರದಾಯಿಕ ತಡೆ ನಶಿಸುತ್ತಿದೆ
  • ಬದಲಾದ ಸನ್ನಿವೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದೆ
  • ಏಕರೂಪ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ

ಏನಿದು ಸಂಹಿತೆ?

ಹಿಂದೂ, ಕ್ರೈಸ್ತ, ಮುಸ್ಲಿಂ, ಪಾರ್ಸಿ ಎಲ್ಲಾ ಧರ್ಮಗಳ ಜನರ ವಿವಾಹ, ವಿಚ್ಛೇದನ, ದತ್ತು, ವಂಶಪಾರಂಪರ್ಯ, ಉತ್ತರಾಧಿಕಾರ ಮೊದಲಾದ ವಿಷಯದಲ್ಲಿ ಇದೀಗ ನಾನಾ ರೀತಿಯ ಕಾನೂನು ಜಾರಿಯಲ್ಲಿದೆ. ಅದನ್ನು ಕೈಬಿಟ್ಟು ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯವಾಗುವಂತೆ ಮಾಡುವುದೇ ಏಕರೂಪ ನಾಗರಿಕ ಸಂಹಿತೆ.

LEAVE A REPLY

Please enter your comment!
Please enter your name here