ಏರ್ ಇಂಡಿಯಾದ ಮೊದಲ ಮಹಿಳಾ ಸಿಇಓ ಆಗಿ ಹರ್ಪ್ರೀತ್ ಸಿಂಗ್ ನೇಮಕ

0
135
Tap to know MORE!

ಹೊಸದಿಲ್ಲಿ, ಅ. 31: ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಪ್ರಾದೇಶಿಕ ಅಂಗ ಸಂಸ್ಥೆ ‘ಅಲಯನ್ಸ್ ಏಯರ್’ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯನ್ನಾಗಿ ಹರ್ಪ್ರೀತ್ ಎ ಡಿ ಸಿಂಗ್ ಅವರನ್ನು ಕೇಂದ್ರ ಸರಕಾರ ನಿಯೋಜಿಸಿದೆ.

ಏರ್ ಇಂಡಿಯಾಕ್ಕೆ ಮಹಿಳೆಯನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತಿರುವುದು ಇದೇ ಮೊದಲು. ಸಿಂಗ್ ಅವರು ಏರ್ ಇಂಡಿಯಾದ ಸಹ ಸಂಸ್ಥೆ ‘ಅಲಯನ್ಸ್ ಏಯರ್’ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ಏರ್ ಇಂಡಿಯಾದ ಮುಖ್ಯ ಆಡಳಿತ ನಿರ್ದೇಶಕ ರಾಜೀವ್ ಬನ್ಸಾಲ್ ಶುಕ್ರವಾರ ನೀಡಿದ ಆದೇಶದಲ್ಲಿ ಹೇಳಿದ್ದಾರೆ.

ಸಿಂಗ್ ಅವರು ಪ್ರಸ್ತುತ ಏರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕಿ (ವಿಮಾನ ಸುರಕ್ಷೆ). ಅವರ ಸ್ಥಾನಕ್ಕೆ ಕ್ಯಾಪ್ಟನ್ ನಿವೇದಿತಾ ಭಾಸಿನ್ ಅವರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಬೋಯಿಂಗ್ 787 ಡ್ರೀಮ್‌ಲೈನರ್ ಅನ್ನು ಚಲಾಯಿಸುತ್ತಿರುವ ನಿವೇದಿತಾ ಭಾಸಿನ್ ಅವರು ಹಿರಿಯ ಕಮಾಂಡರ್.

ಹರ್ಪ್ರೀತ್ ಸಿಂಗ್ ಅವರು 1988ರಲ್ಲಿ ಏರ್ ಇಂಡಿಯಾಕ್ಕೆ ಆಯ್ಕೆಯಾಗಿದ್ದ ಮೊದಲ ಮಹಿಳಾ ಪೈಲೆಟ್. ಆರೋಗ್ಯ ಕಾರಣಕ್ಕೆ ಅವರಿಗೆ ವಿಮಾನ ಚಲಾಯಿಸಲು ಸಾಧ್ಯವಾಗಲಿಲ್ಲ. ಆದರೆ, ಅವರು ವಿಮಾನ ಸುರಕ್ಷೆ ವಿಷಯದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಹರ್ಪ್ರೀತ್ ಸಿಂಗ್ ಅವರು ಭಾರತೀಯ ಮಹಿಳಾ ಪೈಲೆಟ್‌ಗಳ ಸಂಘದ ಮುಖ್ಯಸ್ಥರು ಕೂಡ ಆಗಿದ್ದಾರೆ.

LEAVE A REPLY

Please enter your comment!
Please enter your name here