ಚಂಡೀಗಢ ಜ.17: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚಂಡೀಗಢದಿಂದ ಹಿಸಾರ್ಗೆ ಹೊರಡುವ ಏರ್ ಟ್ಯಾಕ್ಸಿ ಸೇವೆಯನ್ನು ಗುರುವಾರ ಉದ್ಘಾಟಿಸಿದರು.
ಇದರ ಎರಡನೇ ಹಂತದಲ್ಲಿ ಹಿಸಾರ್ನಿಂದ ಡೆಹ್ರಾಡೂನ್ಗೆ ವಾಯು ಸೇವೆಗಳು ಪ್ರಾರಂಭವಾಗಲಿದ್ದು, ಮೂರನೇ ಹಂತದಲ್ಲಿ ಇನ್ನೂ ಎರಡು ಮಾರ್ಗಗಳನ್ನು ಸೇರಿಸಲಾಗುವುದು ಎಂದು ಖಟ್ಟರ್ ಮಾಹಿತಿ ನೀಡಿದರು.
“ದೇಶದಲ್ಲಿ ಮೊದಲ ಬಾರಿಗೆ ಏರ್ ಟ್ಯಾಕ್ಸಿ ರೂಪದಲ್ಲಿ ಸಣ್ಣ ವಿಮಾನವನ್ನು ಸೇವೆಗಳಿಗೆ ಬಳಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಹೇಳಿದರು.
“ಎರಡನೇ ಹಂತದಲ್ಲಿ, ಹಿಸಾರ್ನಿಂದ ಡೆಹ್ರಾಡೂನ್ಗೆ ಜನವರಿ 18 ರಿಂದ ಸೇವೆಗಳು ಪ್ರಾರಂಭವಾಗುತ್ತವೆ. ಮೂರನೇ ಹಂತದಲ್ಲಿ, ಜನವರಿ 23 ರಂದು ಚಂಡೀಗಢದಿಂದ ಡೆಹ್ರಾಡೂನ್ಗೆ ಮತ್ತು ಹಿಸಾರ್ನಿಂದ ಧರ್ಮಶಾಲಾಗೆ ಇನ್ನೂ ಎರಡು ಮಾರ್ಗಗಳನ್ನು ಸೇರಿಸಲಾಗುವುದು” ಎಂದು ಅವರು ಹೇಳಿದರು.
ಈ ಏರ್ ಟ್ಯಾಕ್ಸಿಗಳಲ್ಲಿ ನಾಲ್ಕು ಆಸನಗಳಾಗಿರುತ್ತವೆ ಮತ್ತು ಗಂಟೆಗೆ 250 ಕಿ.ಮೀ ವೇಗದ ಮಿತಿಯನ್ನು ಹೊಂದಿರುತ್ತವೆ ಎಂದು ಖಟ್ಟರ್ ಹೇಳಿದರು.
“ಈ ಏರ್ ಟ್ಯಾಕ್ಸಿ ಪ್ರಾರಂಭವಾದ ರಾಜ್ಯದ ಮತ್ತು ದೇಶದ ಇತರ ಭಾಗದ ಜನರನ್ನು ನಾನು ಅಭಿನಂದಿಸುತ್ತೇನೆ. ಏರ್ ಟ್ಯಾಕ್ಸಿಗಳು ಇತರ ದೇಶಗಳಲ್ಲಿ ಜನಪ್ರಿಯವಾಗಿವೆ. ಈ ಏರ್ ಟ್ಯಾಕ್ಸಿಗಳ ದರಗಳು ಸಹ ಅಷ್ಟೊಂದು ದುಬಾರಿಯಲ್ಲ. ನಾವು ಚಂಡೀಗಢದಿಂದ ಹಿಸಾರ್ಗೆ ಬಂದರೆ ಸಾಮಾನ್ಯ ವೋಲ್ವೋ ಬಸ್ನಲ್ಲಿ ಒಬ್ಬ ವ್ಯಕ್ತಿಯ
ಗೆ 700 ರೂ. ತಗುಲುತ್ತದೆ. ಇಲ್ಲಿ ಒಬ್ಬರು 1,755 ರೂಗಳನ್ನು ಖರ್ಚು ಮಾಡಬೇಕಾಗುತ್ತದೆ” ಎಂದು ಅವರು ಹೇಳಿದರು.