ಐಎಎಸ್ ಆಕಾಂಕ್ಷಿಗಳಿಗೆ ಸ್ಕಾಲರ್‌ಶಿಪ್ ಕೊಡಲು ಮುಂದಾದ ‘ಸೂದ್ ಫೌಂಡೇಶನ್’

0
226
Tap to know MORE!

ಮುಂಬೈ: ಲಕ್ಷಾಂತರ ವಿದ್ಯಾರ್ಥಿಗಳು ಐಎಎಸ್​ ಪರೀಕ್ಷೆ ಬರೆಯಬೇಕು ಎಂಬ ಕನಸು ಇಟ್ಟುಕೊಂಡಿರುತ್ತಾರೆ. ಆದರೆ ಅವರಿಗೆ ಕೋಚಿಂಗ್​ ಪಡೆಯಲು ಹಣ ಇರುವುದಿಲ್ಲ. ಈಗ ಅಂಥವರಿಗೆ ಸೋನು ಸೂದ್​ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಸ್ವತಃ ಸೋನು ಸೂದ್​ ತಮ್ಮ ಟ್ವಿಟರ್​ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ‘ಸೂದ್​ ಚಾರಿಟಿ ಫೌಂಡೇಶನ್​’ ವತಿಯಿಂದ ಈ ಸಹಾಯ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಅವರು ‘ಸಂಭವಂ’ ಎಂದು ಹೆಸರು ಇಟ್ಟಿದ್ದಾರೆ. ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತುಂಬ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಜೂನ್ 21 ರಿಂದ ಕೋವಿಡ್ ಲಸಿಕೆ ಎಲ್ಲರಿಗೂ ಉಚಿತ: ಪ್ರಧಾನಿ ಮೋದಿ

‘ಮಾಡಬೇಕಿದೆಯೇ ಐಎಎಸ್​ ತಯಾರಿ? ನಾವು ಹೊತ್ತುಕೊಳ್ಳುತ್ತೇವೆ ನಿಮ್ಮ ಜವಾಬ್ದಾರಿ’ ಎಂದು ಖುಷಿಯ ಸಮಾಚಾರವನ್ನು ಸೋನು ಸೂದ್​ ತಿಳಿದಿದ್ದಾರೆ. ಈ ಸುದ್ದಿ ಕೇಳಿ ಸಾವಿರಾರು ಐಎಎಸ್​ ಆಕಾಂಕ್ಷಿಗಳು ಖುಷಿ ಆಗಿದ್ದಾರೆ. ಅಂದಹಾಗೆ, ಈ ಸೌಲಭ್ಯ ಪಡೆಯಲು ಜೂ.30ರವರೆಗೆ ಮಾತ್ರ ಅವಕಾಶ ಇದೆ. ತಮ್ಮ ಹೆಸರನ್ನು www.soodcharityfoundation.org ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೋನು ಸೂದ್​ ಮಾಹಿತಿ ನೀಡಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಅವಕಾಶ ಕಲ್ಪಿಸಿರುವುದಕ್ಕೆ ಸಾವಿರಾರು ಜನರು ಧನ್ಯವಾದ ತಿಳಿಸಿದ್ದಾರೆ. ‘ಸಂಪಾದಿಸಿದ ಹಣವನ್ನು ಈ ರೀತಿ ಉಪಯೋಗಿಸಿದ ಏಕೈಕ ಬಾಲಿವುಡ್​ ನಟ ಇವರು. ಆ ಕಾರಣಕ್ಕಾಗಿ ಇವರೇ ನಂಬರ್ ಒನ್​’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆ ಇಂಥ ನೂರಾರು ಜನಪರ ಕೆಲಸಗಳ ಮೂಲಕ ತಾವೊಬ್ಬ ರಿಯಲ್​ ಹೀರೋ ಎಂಬುದನ್ನು ಸೋನು ಸೂದ್​ ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here