ಐಐಟಿ ಮದ್ರಾಸ್ : 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ – ಎಲ್ಲಾ ಪ್ರಯೋಗಾಲಯಗಳು ಸೀಲ್‌ಡೌನ್!

0
38

ಚೆನ್ನೈ ಡಿ.15: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ–ಮದ್ರಾಸ್‌ನ (ಐಐಟಿಎಂ) 104 ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಸಂಸ್ಥೆಯ ಎಲ್ಲ ವಿಭಾಗಗಳು ಹಾಗೂ ಪ್ರಯೋಗಾಲಯಗಳನ್ನು ಮುಚ್ಚಲಾಗಿದೆ.

‘ಸೋಂಕಿತ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ’ ಎಂದು ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್‌ ಹೇಳಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಓರ್ವನಿಗೆ ಕೊರೋನಾ – ಉಳಿದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಐಐಟಿ!

ಐಐಟಿ-ಎಂನಲ್ಲಿ ಡಿಸೆಂಬರ್‌ 1ರಿಂದ 12ರ ವರೆಗೂ 444 ಮಾದರಿಗಳನ್ನು ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿದ್ದು, 104 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಸೋಮವಾರ ಒಂದೇ ದಿನ 33 ಜನರಿಗೆ ಕೋವಿಡ್‌ ಇರುವುದು ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ

‘ಸಂಸ್ಥೆಯ ಎಲ್ಲ ವಿಭಾಗಗಳು ಹಾಗೂ ಪ್ರಯೋಗಾಲಯಗಳನ್ನು ಮುಚ್ಚಲಾಗಿದೆ. ಪ್ರಸ್ತುತ ಸುಮಾರು 700 ವಿದ್ಯಾರ್ಥಿಗಳು ಒಂಬತ್ತು ಹಾಸ್ಟೆಲ್‌ಗಳಲ್ಲಿ ಉಳಿದಿದ್ದು, ಬಹುತೇಕರು ಸಂಶೋಧನಾ ವಿದ್ಯಾರ್ಥಿಗಳಾಗಿದ್ದಾರೆ. ತರಗತಿಗಳನ್ನು ಆನ್‌ಲೈನ್‌ ಮುಖಾಂತರ ನಡೆಸಲಾಗುತ್ತಿದೆ’ ಎಂದು ಐಐಟಿಎಂನ ವಕ್ತಾರರು ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೋವಿಡ್‌–19 ದೃಢಪಟ್ಟವರಲ್ಲಿ ಬಹುತೇಕರು ವಿದ್ಯಾರ್ಥಿಗಳು ಹಾಗೂ ಕೆಲವು ಮಂದಿ ಕ್ಯಾಂಟೀನ್‌ ಕೆಲಸಗಾರರಾಗಿದ್ದಾರೆ. ಸೋಂಕಿನ ಮೂಲದ ಬಗ್ಗೆ ಕೇಳಿದಾಗ, “ಇದು ಕ್ಯಾಂಟೀನ್ ಅಥವಾ ಪ್ರಯೋಗಾಲಯಗಳಿಂದ ಹರಡಿರಬಹುದು ಎಂದು ಹೇಳಲಾಗುತ್ತದೆ” ಎಂದು ಅವರು ಹೇಳಿದರು. ಆದರೆ ಅದನ್ನು ಎದುರಿಸಲು ಎಲ್ಲಾ ಕ್ರಮಗಳು ಜಾರಿಯಲ್ಲಿರುವುದರಿಂದ ಮತ್ತಷ್ಟು ಹರಡುವಿಕೆಯ ಬಗ್ಗೆ ಭಯಪಡಬೇಕಾಗಿಲ್ಲ ಎಂದು ಅವರು ಹೇಳಿದರು.

ಮಾನವಸಹಿತ ಚಂದ್ರಯಾನಕ್ಕೆ ಓರ್ವ ಭಾರತೀಯ ಸೇರಿದಂತೆ 18 ಮಂದಿಯನ್ನು ಆಯ್ಕೆ ಮಾಡಿದ ನಾಸಾ

LEAVE A REPLY

Please enter your comment!
Please enter your name here