ಐಪಿಎಲ್ : ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟ – ಬ್ರಿಜೇಶ್ ಪಟೇಲ್

0
185
Tap to know MORE!

ಟ್ವೆಂಟಿ-20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾದ ಬೆನ್ನಲ್ಲೇ, ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲು ಭರದ ಸಿದ್ಧತೆಗಳು ನಡೆಯುತ್ತಿವೆ.

ಯುಎಇ ಯಲ್ಲಿ ಟೂರ್ನಿಯನ್ನು ಆಯೋಜಿಸುವುದು ಬಹುತೇಕ ಖಚಿತವಾಗಿದೆ. ಭಾರತದಲ್ಲಿ ಕೋವಿಡ್ -19 ವೈರಸ್‌ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸುವತ್ತ ಬಿಸಿಸಿಐ ಚಿತ್ತ ಹರಿಸಿದೆ. ಇದರೊಂದಿಗೆ ಚುಟುಕು ಟೂರ್ನಿ ನಡೆಯುವ ಬಗ್ಗೆ ಇದ್ದ ಊಹಾಪೋಹಗಳಿಗೂ ತೆರೆಬಿದ್ದಿದೆ.

ಪೂರ್ಣಪ್ರಮಾಣದ ವೇಳಾಪಟ್ಟಿಯೊಂದಿಗೆ ಅಕ್ಟೋಬರ್-ನವೆಂಬರ್‌ನಲ್ಲಿ ಟೂರ್ನಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ‘ಇನ್ನು ಹತ್ತು ದಿನಗಳೊಳಗೆ ಐಪಿಎಲ್ ಸಮಿತಿಯ ಸರ್ವಸದಸ್ಯರ ಸಭೆ ನಡೆಯಲಿದೆ. ಅದರಲ್ಲಿ ಅಂತಿಮ ವೇಳಾಪಟ್ಟಿಯ ಕುರಿತು ನಿರ್ಧರಿಸಲಾಗುವುದು’.

ಒಟ್ಟು 60 ಪಂದ್ಯಗಳನ್ನು ನಡೆಸಲಾಗುವುದು. ಅದೂ ಯುಎಇಯಲ್ಲಿ’ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

‘ಅಲ್ಲಿ ಅಥವಾ ಇಲ್ಲಿ (ಭಾರತ) ಎಲ್ಲಿಯಾದರೂ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿಯೇ ಪಂದ್ಯಗಳು ನಡೆಯಬೇಕು. ಆದ್ದರಿಂದ ಆಯೋಜಕರ ಕಾರ್ಯಾಚರಣೆಗೆ ಹೆಚ್ಚು ಒತ್ತಡವಿರುವುದಿಲ್ಲ. ಅತ್ಯಗತ್ಯವಾದ ಸಿಬ್ಬಂದಿ, ತಂಡಗಳ ಪ್ರಯಾಣ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here